ಸೋಮವಾರ, ಜನವರಿ 27, 2020
27 °C
ಆಸ್ತಿ ವೈಷಮ್ಯವೇ ಕೊಲೆಗೆ ಕಾರಣ? ಸ್ಥಳಕ್ಕೆ ಗ್ರಾಮಾಂತರ ಪೊಲೀಸರ ಭೇಟಿ

ಜೋಡುಪಾಲದಲ್ಲಿ ಮಹಿಳೆಯ ಬರ್ಬರ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಆಸ್ತಿ ವೈಷಮ್ಯದಿಂದ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜೋಡುಪಾಲದ ಕುಡಿಯುರ ಕಾಲೊನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಅಬ್ಬಿಕೊಲ್ಲಿಯ ನಿವಾಸಿ ಹೊನ್ನಮ್ಮ ಕೊಲೆಯಾದ ಮಹಿಳೆ.

ಹೊನ್ನಮ್ಮ ಅವರ ಸಂಬಂಧಿ ಆನಂದ್‌ ಎಂಬಾತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಎರಡು ಕುಟುಂಬಗಳ ನಡುವೆ ಆಸ್ತಿ ಸಂಬಂಧ ಗಲಾಟೆ ಇತ್ತು ಎನ್ನಲಾಗಿದೆ. ಕುಡಿಯರ ಕಾಲೊನಿಗೆ ಭೇಟಿ ನೀಡಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)