ಸೋಮವಾರ, ನವೆಂಬರ್ 18, 2019
20 °C

ಅನೈತಿಕ ಸಂಬಂಧ ಯುವಕನ ಕೊಲೆ

Published:
Updated:

ಬೆಂಗಳೂರು: ಅನೈತಿಕ ಸಂಬಂಧದ ಕಾರಣಕ್ಕೆ ಯುವಕನೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಸುಂಕದಕಟ್ಟೆಯ ಶ್ರೀನಿವಾಸನಗರ ನಿವಾಸಿ ತಿಮ್ಮೇಗೌಡ (26) ಕೊಲೆಯಾದ ಯುವಕ. ಘಟನೆ ಸಂಬಂಧ ಬ್ಯಾಡರಹಳ್ಳಿ ನಿವಾಸಿ ಮಣಿಕಂಠ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತಿಮ್ಮೇಗೌಡ, ಪ್ಲಂಬರ್‌ ಕೆಲಸ ಮಾಡುವ ಮಣಿಕಂಠನ ಪತ್ನಿಯನ್ನು ಪ್ರೀತಿಸಿ ಕೆಲವು ದಿನಗಳ ಹಿಂದೆ ತನ್ನೊಂದಿಗೆ ಕರೆತಂದಿದ್ದ. ಈಚೆಗೆ ಆಕೆ ಈತನನ್ನು ಬಿಟ್ಟು ಹೋಗಿದ್ದಳು.

ತಿಮ್ಮೇಗೌಡನ ಮೇಲೆ ಕೋಪಗೊಂಡಿದ್ದ ಮಣಿಕಂಠ, ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಪ್ರತಿಕ್ರಿಯಿಸಿ (+)