ಸೋಮವಾರ, ಸೆಪ್ಟೆಂಬರ್ 23, 2019
24 °C

ಅಪಘಾತ; ಕಾನ್‌ಸ್ಟೆಬಲ್‌ಗೆ ಗಾಯ

Published:
Updated:

ಬೆಂಗಳೂರು: ಆರ್‌.ಟಿ.ನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಅಪಘಾತ ಸಂಭವಿಸಿದ್ದು, ಕಾನ್‌ಸ್ಟೆಬಲ್ ಕೊಟ್ರೇಶ್ (39) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಶೋಕನಗರ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಟ್ರೇಶ್, ನಾಗರಬಾವಿಯಲ್ಲಿ ವಾಸವಿದ್ದಾರೆ.

ಸ್ನೇಹಿತರನ್ನು ಭೇಟಿಯಾಗಲು ಯಲಹಂಕಕ್ಕೆ ಹೋಗಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ.

‘ಕೊಟ್ರೇಶ್ ಅವರ ಬೈಕ್‌ಗೆ ಅಪರಿಚಿತ ವಾಹನದೊಂದು ಡಿಕ್ಕಿ ಹೊಡೆದಿದೆ. ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ.

ಸ್ಥಳೀಯರೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದ ಬಳಿಕ ವಾಹನ ಚಾಲಕ ಪರಾರಿಯಾಗಿದ್ದಾನೆ’ ಎಂದು ಆರ್.ಟಿ.ನಗರ ಸಂಚಾರ ಪೊಲೀಸರು ಹೇಳಿದರು. 

Post Comments (+)