ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಎಣಿಕೆಗೆ ಸಿದ್ಧತೆ: ತರಬೇತಿ

Last Updated 20 ಮೇ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ನಗರದ ಮೂರು ಕ್ಷೇತ್ರಗಳಲ್ಲಿ ಸಿದ್ಧತೆ ಪೂರ್ಣಗೊಂಡಿದ್ದು, ಒಟ್ಟು 1,491 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.

ಪ್ರತಿ ಕ್ಷೇತ್ರಕ್ಕೆ ತಲಾ 497 ಮತ ಎಣಿಕೆ ಮೇಲ್ವಿಚಾರಕರು, ಅಷ್ಟೇ ಸಂಖ್ಯೆಯ ಎಣಿಕೆ ಸಹಾಯಕರು ಮತ್ತು ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. ಎಲ್ಲರಿಗೂ ಒಂದು ‌ಹಂತದ ತರಬೇತಿ ನೀಡಲಾಗಿದೆ. ಎಣಿಕೆ ಮೇಲ್ವಿಚಾರಕರು ಮತ್ತು ಸಹಾಯಕರಿಗೆ ಇದೇ 22ರಂದು ಮತ್ತೊಂದು ಹಂತದ ತರಬೇತಿ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ತಲಾ 8 ವಿಧಾನಸಭಾ ಕ್ಷೇತ್ರಗಳಿವೆ. ತಲಾ 14 ಮತ ಎಣಿಕೆ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. 300ಕ್ಕೂ ಹೆಚ್ಚು ಮತಗಟ್ಟೆಗಳಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಮತ ಎಣಿಕೆ ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ದಾಸರಹಳ್ಳಿ, ಕೆ.ಆರ್.ಪುರ, ಬ್ಯಾಟರಾಯನಪುರ ಕ್ಷೇತ್ರಗಳ ಮತ ಎಣಿಕೆಗೆ ತಲಾ 26 ಟೇಬಲ್, ಯಶವಂತಪುರ ಮತ್ತು ಬೊಮ್ಮನಹಳ್ಳಿ ಕ್ಷೇತ್ರಕ್ಕೆ ತಲಾ 24, ಮಹದೇವಪುರ ಕ್ಷೇತ್ರಕ್ಕೆ 28 ಮತ್ತು ಸರ್ವಜ್ಞನಗರ ಕ್ಷೇತ್ರಕ್ಕೆ 21 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.

ಬೆಂಗಳೂರು ಉತ್ತರದಲ್ಲಿ 31, ದಕ್ಷಿಣ ಕ್ಷೇತ್ರದಲ್ಲಿ 25 ಮತ್ತು ಕೇಂದ್ರ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳಿದ್ದಾರೆ. ಎಲ್ಲಾ ಅಭ್ಯರ್ಥಿಗಳ ಎಣಿಕಾ ಏಜೆಂಟರು ಪಾಸ್ ಪಡೆದು ಬಂದರೆ ಕುಳಿತುಕೊಳ್ಳಲು ಕುರ್ಚಿಗಳನ್ನು ಹಾಕಲು ಆಗುವುದಿಲ್ಲ. ಚುನಾವಣಾ ಆಯೋಗದ ನಿರ್ದೇಶನದಂತೆ ರಾಷ್ಟ್ರೀಯ ಪಕ್ಷಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಂತರ ಪ್ರಾದೇಶಿಕ ಪಕ್ಷಗಳು, ಬಳಿಕ ಮಾನ್ಯತೆ ಇಲ್ಲದ ನೋದಾಯಿತ ಪಕ್ಷಗಳು, ಆ ನಂತರ ಪಕ್ಷೇತರ ಅಭ್ಯರ್ಥಿಗಳ ಪ್ರತಿನಿಧಿಗಳಿಗೆ ಕ್ರಮವಾಗಿ ಆದ್ಯತೆ ನೀಡಲಾಗುವುದು. ಉಳಿದವರು ನಿಂತುಕೊಂಡೇ ಎಣಿಕಾ ಕಾರ್ಯ ವೀಕ್ಷಣೆ ಮಾಡಬಹುದು ಎಂದು ತಿಳಿಸಿದರು.

ಮೊಬೈಲ್ ಬಳಕೆ ನಿಷಿದ್ಧ: ಎಣಿಕೆ ಕೇಂದ್ರಕ್ಕೆ ಬರುವ ಅಧಿಕಾರಿ, ಎಣಿಕಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ
ಗಳು ಮೊಬೈಲ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ. ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಮಂಜುನಾಥ ಪ್ರಸಾದ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳು ಮಾತ್ರ ಮೊಬೈಲ್‌ನೊಂದಿಗೆ ಹಾಜರಾಗಲು ಅವಕಾಶ ಇದೆ. ಆದರೆ, ಎಣಿಕಾ ಕೊಠಡಿಗಳಿಗೆ ಪ್ರವೇಶಿಸಲು ಅನುಮತಿ ಇಲ್ಲ ಎಂದರು.

‘ಸಂಜೆ 5ಕ್ಕೆ ಫಲಿತಾಂಶ ಘೋಷಣೆ’

ಮತ ಎಣಿಕೆ ಬೆಳಿಗ್ಗೆ 8ಕ್ಕೆ ಆರಂಭವಾಗಲಿದೆ. ಮೂರು ಕ್ಷೇತ್ರಗಳಿಂದ 11,063 ‌ಅಂಚೆ ಮತಪತ್ರಗಳಿವೆ. 563 ಇಟಿಪಿಬಿಎಸ್ (ಸೇವಾ ಮತದಾರರಿಗೆ ನೀಡುವ ಎಲೆಕ್ಟ್ರಾನಿಕ್ ಮತಪತ್ರ) ಮತ ಪತ್ರಗಳಿವೆ. ಅರ್ಧ ಗಂಟೆಗಳಲ್ಲಿ ಅವುಗಳ ಎಣಿಕೆ ಮುಗಿಸಲಾಗುವುದು ಎಂದು ಮಂಜುನಾಥ ಪ್ರಸಾದ್‌ ಹೇಳಿದರು.

ಬಳಿಕ ವಿದ್ಯುನ್ಮಾನ ಯಂತ್ರಗಳಲ್ಲಿನ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. 12 ಗಂಟೆ ಸುಮಾರಿಗೆ ಇವುಗಳ ಎಣಿಕೆ ಮುಕ್ತಾಯವಾಗಲಿದೆ. ನಂತರ ಪ್ರತಿ ವಿಧಾನಸಭಾ ಕ್ಷೇತ್ರವಾರು ಲಾಟರಿ ಮೂಲಕ 5 ಮತಗಟ್ಟೆಗಳ ವಿ.ವಿ ಪ್ಯಾಟ್‌ಗಳನ್ನು ಆರಿಸಿ ಸ್ಲಿಪ್‌ಗಳ ಎಣಿಕೆ ಕೈಗೊಳ್ಳಲಾಗುವುದು. ಎಲ್ಲಾ ಪ್ರಕ್ರಿಯೆಗಳು ಮುಗಿದು ಅಧಿಕೃತವಾಗಿ ಫಲಿತಾಂಶ ಘೋಷಣೆಯಾಗುವಾಗ ಸಂಜೆ 5ರಿಂದ 6 ಗಂಟೆಯಾಗಲಿದೆ ಎಂದರು.

ಮಂತ್ರಿಗಳಿಗೂ ಪ್ರವೇಶ ಇಲ್ಲ: ಪಾಸ್ ಪಡೆಯದ ಸಚಿವರು ಅಥವಾ ಶಾಸಕರು ಮತ ಎಣಿಕಾ ಕೇಂದ್ರ ಪ್ರವೇಶಿಸಲು ಅವಕಾಶ ಇಲ್ಲ. ಎಣಿಕಾ ಏಜೆಂಟರ ಪಾಸ್‌ ಅನ್ನು ಶಾಸಕರು ಪಡೆದಿದ್ದರೆ, ನಿರ್ದಿಷ್ಟ ಟೇಬಲ್‌ ಬಳಿಯೇ ಕೂರಬೇಕು. ಕೊಠಡಿಯಿಂದ ಕೊಠಡಿಗೆ ಓಡಾಡಲು ಅವರಿಗೂ ಅವಕಾಶ ಇಲ್ಲ. ಅಭ್ಯರ್ಥಿ ಮತ್ತು ಅವರ ಚುನಾವಣಾ ಏಜೆಂಟರೊಬ್ಬರಿಗೆ ಮಾತ್ರ ಎಲ್ಲೆಡೆ ಓಡಾಡಲು ಅವಕಾಶ ಇರಲಿದೆ ಎಂದು ಹೇಳಿದರು.

ಮೊಬೈಲ್ ಬಳಕೆ ನಿಷಿದ್ಧ

ಎಣಿಕೆ ಕೇಂದ್ರಕ್ಕೆ ಬರುವ ಅಧಿಕಾರಿ, ಎಣಿಕಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಗಳು ಮೊಬೈಲ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ. ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಮಂಜುನಾಥ ಪ್ರಸಾದ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳು ಮಾತ್ರ ಮೊಬೈಲ್‌ನೊಂದಿಗೆ ಹಾಜರಾಗಲು ಅವಕಾಶ ಇದೆ. ಆದರೆ, ಎಣಿಕಾ ಕೊಠಡಿಗಳಿಗೆ ಪ್ರವೇಶಿಸಲು ಅನುಮತಿ ಇಲ್ಲ ಎಂದರು.

ಮಂತ್ರಿಗಳಿಗೂ ಪ್ರವೇಶ ಇಲ್ಲ

ಪಾಸ್ ಪಡೆಯದ ಸಚಿವರು ಅಥವಾ ಶಾಸಕರು ಮತ ಎಣಿಕಾ ಕೇಂದ್ರ ಪ್ರವೇಶಿಸಲು ಅವಕಾಶ ಇಲ್ಲ ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.

ಎಣಿಕಾ ಏಜೆಂಟರ ಪಾಸ್‌ ಅನ್ನು ಶಾಸಕರು ಪಡೆದಿದ್ದರೆ, ನಿರ್ದಿಷ್ಟ ಟೇಬಲ್‌ ಬಳಿಯೇ ಕೂರಬೇಕು. ಕೊಠಡಿಯಿಂದ ಕೊಠಡಿಗೆ ಓಡಾಡಲು ಅವರಿಗೂ ಅವಕಾಶ ಇಲ್ಲ. ಅಭ್ಯರ್ಥಿ ಮತ್ತು ಅವರ ಚುನಾವಣಾ ಏಜೆಂಟರೊಬ್ಬರಿಗೆ ಮಾತ್ರ ಎಲ್ಲೆಡೆ ಓಡಾಡಲು ಅವಕಾಶ ಇರಲಿದೆ ಎಂದು ಹೇಳಿದರು.

18 ಗಂಟೆ ನಿಷೇಧಾಜ್ಞೆ

23ರ ಬೆಳಿಗ್ಗೆ 6ರಿಂದ ರಾತ್ರಿ 12 ಗಂಟೆ ತನಕ ನಗರದಾದ್ಯಂತ ನಿಷೇಧಾಜ್ಞೆ(144) ಇರಲಿದೆ ಎಂದು ನಗರ ಪೊಲೀಸ್ ಕಮಿಷನರ್ ಟಿ. ಸುನೀಲ್‌ಕುಮಾರ್ ತಿಳಿಸಿದರು. 23ರ ಬೆಳಿಗ್ಗೆ 6ರಿಂದ 24ರ ಬೆಳಿಗ್ಗೆ 6 ಗಂಟೆ ತನಕ ಮದ್ಯ ಮಾರಾಟ ನಿಷೇಧಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ನಗರ ವ್ಯಾಪ್ತಿಯಲ್ಲಿ 92 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ₹1.52 ಕೋಟಿ ನಗದು, ₹1.10 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಭದ್ರತೆಗೆ ನಿಯೋಜನೆ ಆಗಿರುವ ಸಿಬ್ಬಂದಿ

* 7 -ಡಿಸಿಪಿ

* 24 - ಎಸಿಪಿ

* 86 - ಇನ್‌ಸ್ಪೆಕ್ಟರ್‌

* 180 - ಸಬ್ ಇನ್‌ಸ್ಪೆಕ್ಟರ್

* 2,000 - ಎಎಸ್‌ಐ, ಹೆಡ್ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT