ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮಾಸ್‌ ಶಿಶು ಕೇಂದ್ರದ ವಾರ್ಷಿಕೋತ್ಸವ

Last Updated 8 ಮೇ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಇನ್‌ ವಿಟ್ರೋ ಫರ್ಟಿಲೈಸೇಷನ್‌ (ಐವಿಎಫ್‌) ಚಿಕಿತ್ಸೆಯ ಜೊತೆಗೆ ಉತ್ತಮ ಆಹಾರ ಪದ್ಧತಿ ಹಾಗೂ ವ್ಯಾಯಾಮ ಕ್ರಮ ಅನುಸರಿಸುವುದರಿಂದ ಬಂಜೆತನ ನಿವಾರಣೆ ಮಾಡಬಹುದು’ ಎಂದು ಡಾ.ರಮಾಸ್‌ ಟೆಸ್ಟ್‌ಟ್ಯೂಬ್‌ ಬೇಬಿ ಸೆಂಟರ್‌ ಸಂಸ್ಥಾಪಕಿ ಡಾ.ಪಿ.ರಮಾದೇವಿ ತಿಳಿಸಿದರು.

ಇಂದಿರಾನಗರ ಶಾಖೆಯ ಆರನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ,‘ ಬಂಜೆತನ ವೈಯಕ್ತಿಕ ಸಮಸ್ಯೆಯಲ್ಲ. ಸಾಮಾನ್ಯ ಕಾಯಿಲೆಗಳಂತೆ ಇದು ಕೂಡಾ ಒಂದು. ಮಹಿಳೆಯರಲ್ಲಿ ಮಾತ್ರವಲ್ಲದೇ ಪುರುಷರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ’ ಎಂದರು.

‘ನಮ್ಮ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದ ಮಹಿಳೆಯರು ಬಂಜೆತನದಿಂದ ಮುಕ್ತಿ ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಬಂಜೆತನ ನಿವಾರಣೆ ಚಿಕಿತ್ಸೆ ನೀಡುತ್ತಿದ್ದೇವೆ. ಈ ವರ್ಷದಲ್ಲಿ ಕೋರಮಂಗಲ, ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿಗಳಲ್ಲಿ ಕೇಂದ್ರ ತೆರೆಯಲಾಗುವುದು’ ಎಂದರು.

‘ಬಂಜೆತನಕ್ಕೆ ಚಿಕಿತ್ಸೆ ನೀಡುವುದಷ್ಟೇ ತಜ್ಞರ ಕೆಲಸವಲ್ಲ. ಚಿಕಿತ್ಸೆ ಪಡೆದ ಮಹಿಳೆ ಅಥವಾ ಪುರುಷ ಆರೋಗ್ಯಕರ ಹಾಗೂ ಸಾಮರಸ್ಯ ಜೀವನ ನಡೆಸಲು ಸಲಹೆ ನೀಡುವುದು ನಮ್ಮ ಕರ್ತವ್ಯ. ಮಕ್ಕಳಾಗುವುದಿಲ್ಲ ಎಂಬ ಚಿಂತೆಯಲ್ಲಿ ವಿಶ್ವಾಸ ಕಳೆದುಕೊಳ್ಳುವ ದಂಪತಿಗಳಿಗೆ ನಮ್ಮ ಸಂಸ್ಥೆಆತ್ಮಸ್ಥೈರ್ಯ ತುಂಬುತ್ತದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಖಿ ಮಿಶ್ರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT