ಬೆಂಗಳೂರಿಗೆ ಬಂದಿಳಿದ ರಮೇಶ್‌ ಜಾರಕಿಹೊಳಿ: ರಾಜೀನಾಮೆ ಪ್ರಕಟ?

ಶನಿವಾರ, ಮೇ 25, 2019
28 °C

ಬೆಂಗಳೂರಿಗೆ ಬಂದಿಳಿದ ರಮೇಶ್‌ ಜಾರಕಿಹೊಳಿ: ರಾಜೀನಾಮೆ ಪ್ರಕಟ?

Published:
Updated:

ಬೆಂಗಳೂರು: ಅತೃಪ್ತ ಕಾಂಗ್ರೆಸ್‌ ಶಾಸಕ ರಮೇಶ ಜಾರಕಿಹೊಳಿ ಬುಧವಾರ ಬೆಂಗಳೂರಿಗೆ ಬಂದಿದ್ದು, ರಾಜೀನಾಮೆ ನೀಡುವ ಅವರ ಹೇಳಿಕೆಗೆ ಮತ್ತುಷ್ಟು ಪುಷ್ಠಿ ನೀಡಿದಂತಾಗಿದೆ.

ಗೋಕಾಕದಲ್ಲಿ ಮಂಗಳವಾರ ಮಾತನಾಡಿದ್ದ ರಮೇಶ ಜಾರಕಿಹೊಳಿ, ‘ನಾನಿನ್ನೂ ಕಾಂಗ್ರೆಸ್‌ನಲ್ಲಿಯೇ ಇದ್ದೇನೆ. ಯಾವಾಗ ರಾಜೀನಾಮೆ ನೀಡಬೇಕೆಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಬಹಿರಂಗಪಡಿಸುತ್ತೇನೆ’ ಎಂದು ತಿಳಿಸಿದರು. ಇವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಏಕೆ ರಾಜೀನಾಮೆ ಕೊಡ್ತಾರೊ ಗೊತ್ತಿಲ್ಲ– ಜಿ.ಪರಮೇಶ್ವರ

ಬೆಳಗಾವಿಯಿಂದ ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ಬಂದಿರುವ ರಮೇಶ್‌ ಜಾರಕಿಹೊಳಿ ಅವರು ಸೆವೆನ್‌ ಮಿನಿಸ್ಟರ್‌ ಕ್ವಾಟ್ರಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಉಳಿದುಕೊಂಡಿದ್ದಾರೆ.

ಇದನ್ನೂ ಓದಿ: ರಮೇಶ್‌ ಜಾರಕಿಹೊಳಿ ಹೋದರೆ ಹೋಗಲಿ– ಶಾಮನೂರು

ರಮೇಶ ಅವರನ್ನು ಮನವೊಲಿಸಲು ‘ಮೈತ್ರಿ’ಕೂಟದ ನಾಯಕರು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವವರೆಗೆ (ಮೇ 23) ರಮೇಶ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರಲು ಕಾಂಗ್ರೆಸ್‌ ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !