ಶುಕ್ರವಾರ, ಫೆಬ್ರವರಿ 28, 2020
19 °C

ಪದವಿ ಪ್ರದಾನದಲ್ಲಿ ಅವ್ಯವಸ್ಥೆ, ಗೊಂದಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿ ನಡೆದ ವಿಟಿಯ ಘಟಿಕೋತ್ಸವದಲ್ಲಿ ಪಿಎಚ್‌.ಡಿ ಪಡೆದವರಿಗೆ ಪದವಿ ಪ್ರದಾನ ಮಾಡುವಾಗ ಅವ್ಯವಸ್ಥೆ ಮತ್ತು ಗೊಂದಲ ಉಂಟಾಯಿತು.

ಈ ಬಾರಿ ದಾಖಲೆಯ 620 ಮಂದಿಗೆ ಪಿಎಚ್‌.ಡಿ ನೀಡಲಾಗಿದೆ. ಎಲ್ಲವೂ ವ್ಯವಸ್ಥಿತವಾಗಿ ನಡೆದಿತ್ತು. ಆದರೆ, ಮಧ್ಯದಲ್ಲಿ ಹಲವರಿಗೆ ನೀಡಿದ ಪ್ರಮಾಣಪತ್ರದಲ್ಲಿ ಗೊಂದಲ ಉಂಟಾಯಿತು. ಯಾರದೋ ಹೆಸರಿನ ಪ್ರಮಾಣಪತ್ರ ಇನ್ಯಾರಿಗೋ ಕೊಡಲಾಯಿತು! ಆಯೋಜಕರು ಪಿಎಚ್‌.ಡಿ ಪದವಿ ಪಡೆದವರಿಗೇ ಪ್ರಮಾಣಪತ್ರ ಕೊಡುತ್ತಿದ್ದರು. ಅವರು ವೇದಿಕೆ ಮೇಲಿದ್ದ ಮುಖ್ಯಅತಿಥಿಗಳಿಗೆ ನೀಡಿ ಮತ್ತೆ ಅವರಿಂದ ಪಡೆದುಕೊಂಡು ಫೋಟೊಗೆ ಪೋಸು ಕೊಡುತ್ತಿದ್ದರು. ಹೀಗೆ ಪಡೆದ ಕೆಲವರು ಮುಜುಗರ ಅನುಭವಿಸಿದ್ದೂ ಕಂಡುಬಂತು.

‘ಮ್ಯರಾಥಾನ್‌ ಪಿಎಚ್‌.ಡಿ. ಪ್ರದಾನ’ ನಡೆಯಿತು. ಕೆಲವರು, ತಮ್ಮ ಪ್ರಮಾಣಪತ್ರಗಳನ್ನು ತಾವೇ ಹುಡುಕಿಕೊಳ್ಳಬೇಕಾದ ಪ್ರಸಂಗವೂ ನಡೆಯಿತು. ‘ಯಾರದೋ ಪ್ರಮಾಣಪತ್ರ ಯಾರಿಗೋ ಕೊಡುವುದಾದರೆ ಕಾರ್ಯಕ್ರಮ ನಡೆಸಬೇಕೇಕೆ’ ಎಂದು ಕೆಲವರು ವೇದಿಕೆ ಪಕ್ಕದಲ್ಲಿ ಆಯೋಜಕರನ್ನು ಪ್ರಶ್ನಿಸುತ್ತಿದ್ದುದು ಕಂಡುಬಂತು.

ಬಳಿಕ, ‘ಪ್ರಮಾಣಪತ್ರ ವಿತರಣೆಯಲ್ಲಿ ಆಗಿರುವ ಗೊಂದಲವನ್ನು ನಂತರ ಸರಿಪಡಿಸಲಾಗುವುದು’ ಎಂದು ಆಯೋಜಕರು ಪ್ರಕಟಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು