ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಸಾವಿರ ಮಠದ ಪೀಠಕ್ಕೇರುವುದು ನಿಶ್ಚಿತ

Last Updated 22 ಏಪ್ರಿಲ್ 2019, 16:52 IST
ಅಕ್ಷರ ಗಾತ್ರ

ತಿಪಟೂರು: ‘ಈ ಹಿಂದೆ ಹುಬ್ಬಳ್ಳಿ ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿ ಆಗಿದ್ದ ನನ್ನನ್ನು ಕುತಂತ್ರ ಮಾಡಿ ದೂರ ತಳ್ಳಿದರು. ಆದರೆ, ಆ ಮಠಕ್ಕೆ ನಾನು ಒಂದಲ್ಲಾ ಒಂದು ದಿನ ಮಠಾಧೀಶನಾಗುವುದು ನಿಶ್ಚಿತ’ ಎಂದು ಇಲ್ಲಿನ ಷಡಕ್ಷರ ಮಠದ ಡಾ.ರುದ್ರಮುನಿ ಸ್ವಾಮೀಜಿ ಒತ್ತಿ ಹೇಳಿದರು.

ನಗರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನ್ನ ನಿಷ್ಠೆ, ಧಾರ್ಮಿಕ ಶ್ರದ್ಧೆ, ಸೇವಾ ಮನೋಭಾವ ಗುರುತಿಸಿ ಹಿಂದಿನ ಗುರುಗಳಾಗಿದ್ದ ಡಾ.ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿದ್ದರು’ ಎಂದರು.

‘ಬಡತನದ ಕಾರಣದಿಂದ ಶಿಕ್ಷಣ ಪಡೆಯಲು ಮಠಕ್ಕೆ ಹೋಗಿದ್ದೆ. ಬಡ ಕುಟುಂಬದಿಂದ ಬಂದಿದ್ದ ನಾನು ಆ ದೊಡ್ಡ ಮಠಕ್ಕೆ ಉತ್ತರಾಧಿಕಾರಿ ಆಗಿದ್ದು ಸೌಭಾಗ್ಯ. ನನ್ನ ಸುಧಾರಣಾ ಕ್ರಮಗಳನ್ನು ಸಹಿಸದ ಕೆಲವರು ಕುತಂತ್ರ ಮಾಡಿ ಮಠದಿಂದ ದೂರ ಮಾಡಿದರು. ಆದರೆ, ನ್ಯಾಯಸಮ್ಮತವಾಗಿ ನಾನೇ ಪೀಠಾಧಿಪತಿ ಆಗಬೇಕು. ಇದು ಒಂದಲ್ಲಾ ಒಂದು ದಿನ ಸಾಧ್ಯವಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT