‘ಚಾಲಕಿಯರಾದೆವು ನಾವೆಲ್ಲ’

7

‘ಚಾಲಕಿಯರಾದೆವು ನಾವೆಲ್ಲ’

Published:
Updated:
Deccan Herald

ಬೆಂಗಳೂರು: ಏನೋ ಸಾಧಿಸಿದ ಭಾವ ಅವರಲ್ಲಿ ಎದ್ದು ಕಾಣುತ್ತಿತ್ತು. ತುತ್ತಿನ ಚೀಲ ತುಂಬಿಕೊಳ್ಳಲು ಕಲಿತ ವಿದ್ಯೆ ನೆರವಾಯಿತಲ್ಲ ಎನ್ನುವ ಸಾರ್ಥಕ ಭಾವ ಕಾರು ಚಾಲಕಿಯರ ಮೊಗದಲ್ಲಿ ಮೂಡಿತ್ತು,

‘ಆ್ಯಕ್ಷನ್ ಆ್ಯಡ್’ ಸಂಘಟನೆಯು ‘ಡಿಎಕ್ಸ್‌ಸಿ ಟೆಕ್ನಾಲಜೀಸ್‌' ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸಿತ್ತು. 

ಕಾಟನ್‌ಪೇಟೆಯ ಕೊಳೆಗೇರಿಗಳ 15 ಮಹಿಳೆಯರಿಗೆ ಕಾರು ಚಾಲನಾ ತರಬೇತಿ ನೀಡಲಾಗಿದ್ದು, ಅವರೆಲ್ಲರಿಗೂ ಪ್ರಮಾಣ ಪತ್ರ ವಿತರಣೆಯನ್ನು ಮಾಡಲಾಯಿತು. 

‘ನಾನು ಟೇಲರ್ ಕೆಲಸ ಮಾಡಿಕೊಂಡಿದ್ದವಳು. ಕಾರು ಚಾಲನೆ ನನ್ನಿಂದ ಅಸಾಧ್ಯ ಎಂದೇ ಭಾವಿಸಿದ್ದೆ. ಆದರೆ, ತರಬೇತಿಯ ನಂತರ ಯಶಸ್ವಿಯಾಗಿ ಕಾರು ನಡೆಸಲು ಕಲಿತಿದ್ದೇನೆ. ಸದ್ಯ ಗೋ ಪಿಂಕ್‌ ಸಂಸ್ಥೆ ಚಾಲಕಿಯಾಗಿ ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ’ ಎಂದು ಸ್ಲಂ ಮಹಿಳಾ ಸಂಘಟನೆಯ ಸದಸ್ಯೆ ಗಾಯತ್ರಿ ಹೇಳಿದರು.

‘ಕಾರು ಚಾಲನಾ ತರಬೇತಿಗೆ ಒಟ್ಟು 30 ಜನ ಆಯ್ಕೆಯಾಗಿದ್ದಾರೆ. ಮೊದಲ ಬ್ಯಾಚ್‌ನಲ್ಲಿ 15 ಜನರಿಗೆ ಕಾರು ಚಾಲನಾ ತರಬೇತಿ ಜತೆಗೆ
ಸ್ವಯಂ ರಕ್ಷಣಾ ತರಬೇತಿಯನ್ನೂ ನೀಡಲಾಗಿದೆ. ಪ್ರಮಾಣಪತ್ರ ಮತ್ತು ಚಾಲನಾ ಪರವಾನಗಿ (ಡಿ.ಎಲ್‌) ವಿತರಣೆ ಮಾಡಲಾಗಿದೆ.

ಮುಂದಿನ ಬ್ಯಾಚ್‌ನಲ್ಲಿ ಎನ್‌ಸಿಟಿಸಿ ಪಾಳ್ಯ ಹಾಗೂ ಸ್ಪಾಟ್‌ಲೈಟ್‌ನ  15 ಮಹಿಳೆಯರಿಗೆ ತರಬೇತಿ ನೀಡಲಿದ್ದೇವೆ’ ಎಂದು ಯೋಜನೆಯ ಸಂಯೋಜಕ ನವೀನ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !