ಶನಿವಾರ, ಸೆಪ್ಟೆಂಬರ್ 26, 2020
23 °C

ಜಯಾ ಸಂಗ್ರಹದಲ್ಲಿ 8 ಸಾವಿರಕ್ಕೂ ಹೆಚ್ಚು ಪುಸ್ತಕಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಮೂರೂವರೆ ವರ್ಷಗಳ ಹಿಂದೆ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಚಿನ್ನದ ಒಡವೆಗಳ ಮೇಲಿರುವಷ್ಟೇ ವ್ಯಾಮೋಹ ಪುಸ್ತಕಗಳ ಬಗ್ಗೆಯೂ ಇತ್ತು ಎಂಬ ಸುದ್ದಿ ಈಗ ಹೊರಬಿದ್ದಿದೆ.

ಚೆನ್ನೈನ ಪ್ರತಿಷ್ಠಿತ ಪೊಯೆಸ್ ‌ಗಾರ್ಡನ್‌ನಲ್ಲಿರುವ ಜಯಾ ಅವರ ಬಂಗಲೆಯನ್ನು ವಶಪಡಿಸಿಕೊಂಡಿರುವ ತಮಿಳುನಾಡು ಸರ್ಕಾರವು ಮನೆ ಯಲ್ಲಿದ್ದ ವಸ್ತುಗಳ ಪಟ್ಟಿಯನ್ನು ಇದೇ ಮೊದಲ ಬಾರಿಗೆ
ಬಹಿರಂಗಗೊಳಿಸಿದೆ.

ಬಂಗಲೆಯ ಮೊದಲ ಅಂತಸ್ತಿನಲ್ಲಿದ್ದ ಗ್ರಂಥಾಲಯದಲ್ಲಿದ್ದ 8,376 ಪುಸ್ತಕಗಳಜತೆ ನಾಲ್ಕು ಕಿಲೋ ಬಂಗಾರ, 601.42 ಗ್ರಾಂ ಬೆಳ್ಳಿ, 11 ಟಿ.ವಿ ಸೆಟ್‌, 38 ಏರ್‌ ಕಂಡಿಷನರ್‌, 10 ರೆಫ್ರಿ ಜರೇಟರ್, 653 ಕಡತಗಳು, 253 ಸ್ಟೇಷನರಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸರ್ಕಾರ ಹೊರಡಿಸಿದ ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟಿಸಲಾಗಿದೆ. 

ತಮಿಳುನಾಡು ಸರ್ಕಾರ ಜಯ ಲಲಿತಾ ಅವರ ‘ವೇದ ನಿಲಯಂ’ ವನ್ನು ಜಯಾ ಸ್ಮಾರಕವಾಗಿ ಅಭಿವೃ ದ್ಧಿಪ ಡಿಸುವುದಾಗಿ ಹೇಳಿದೆ.

ಅದಕ್ಕಾಗಿ ಕಳೆದ ವಾರ ₹67.9 ಕೋಟಿ ಪರಿಹಾರ ಹಣವನ್ನು ಸಿವಿಲ್‌ ಕೋರ್ಟ್‌ನಲ್ಲಿ ಸರ್ಕಾರ ಠೇವಣಿ ಇಟ್ಟಿದೆ. 

ಜಯಲಲಿತಾ ತಮ್ಮ ಓದುವ ಹವ್ಯಾಸ, ಪುಸ್ತಕ ಪ್ರೀತಿಯನ್ನು ಅನೇಕ ಸಂದರ್ಶನಗಳಲ್ಲಿ ಹಂಚಿಕೊಂಡಿದ್ದರು.

‘ಜೀವನದ ಸಂಗಾತಿಗಳಂತಿದ್ದ ಪುಸ್ತಕಗಳು ತಮ್ಮ ಒಂಟಿತನ ದೂರ ಮಾಡಿದ್ದವು’ ಎಂದು ‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು. 2016ರ ಡಿಸೆಂಬರ್‌ನಲ್ಲಿ ಅವರು ಮೃತಪ‍ಟ್ಟರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು