ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ: ಸೋಂಕು ತಡೆ ಸಾಧ್ಯವೇ? ಆಯೋಗಕ್ಕೆ ಪಕ್ಷಗಳ ಪ್ರಶ‍್ನೆ

Last Updated 17 ಜುಲೈ 2020, 12:18 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರ ವಿಧಾನಸಭೆಗೆ ನಡೆಯುವ ಚುನಾವಣೆಯು ರಾಜ್ಯದಲ್ಲಿ ಕೋವಿಡ್‍ ಪ್ರಕರಣಗಳು ಏರಿಕೆಯಾಗಲು ಕಾರಣವಾಗುವುದಿಲ್ಲ ಎಂಬ ಬಗ್ಗೆ ಮತದಾರರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಅಲ್ಲಿನ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಒತ್ತಾಯಿಸಿವೆ.

ಆಯೋಗದ ಅಧಿಕಾರಿಗಳ ಜೊತೆಗಿನ ವಿಡಿಯೊ ಸಂವಾದಕ್ಕೆ ಪೂರ್ವಭಾವಿಯಾಗಿ ಈ ಕುರಿತು ಪ್ರತಿಕ್ರಿಯಿಸಿರುವ ವಿವಿಧ ಪಕ್ಷಗಳು ಈ ಸಂಬಂಧ ಮನವಿ ಸಲ್ಲಿಸಿದ್ದು, ರಾಜ್ಯದಲ್ಲಿ ಪ್ರಸ್ತುತ ಇರುವ ಕೋವಿಡ್ ಪರಿಸ್ಥಿತಿ ಕುರಿತು ಗಮನಸೆಳೆದಿವೆ.

ರಾಜ್ಯದಲ್ಲಿ ಕೋವಿಡ್ ಪರಿಣಾಮ ಗಂಭೀರವಾಗಿದೆ. ರಾಜಧಾನಿ ಪಟ್ನಾದಲ್ಲಿಯೇ ಸುಮಾರು 89 ಕಂಟೈನ್‍ಮೆಂಟ್‍ ವಲಯಗಳಿವೆ. 16 ಜಿಲ್ಲೆಗಳಲ್ಲಿ ಇದೇ 16ರಿಂದ ಲಾಕ್‍ಡೌನ್ ಆರಂಭವಾಗಿದೆ ಎಂಬ ಅಂಶಗಳನ್ನು ಮನವಿಯಲ್ಲಿ ಉಲ್ಲೇಖ ಮಾಡಿವೆ.

ರಾಷ್ಟ್ರೀಯ ಜನತಾದಳ, ಸಿಪಿಐ, ಸಿಪಿಎಂ, ಹಿಂದೂಸ್ತಾನ್‍ ಅವಾಮ್‍ ಮೋರ್ಚಾ ಕೂಡಾ ಈ ಪಕ್ಷಗಳಲ್ಲಿ ಸೇರಿದ್ದು ಸುಮಾರು 16 ಕೋಟಿ ಜನಸಂಖ‍್ಯೆ, 7.5 ಕೋಟಿ ಮತದಾರರು ಇರುವ ರಾಜ್ಯದಲ್ಲಿ ಪರಸ್ಪರ ಎರಡು ಅಡಿ ಅಂತರ ಕಾಯ್ದುಕೊಳ್ಳುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿವೆ.

ಬಿಹಾರ ವಿಧಾನಸಭೆ ಅವಧಿಯು ಈ ವರ್ಷದ ನವೆಂಬರ್ 29ಕ್ಕೆ ಅಂತ್ಯವಾಗಲಿದೆ. ನೂತನ ಚುನಾಯಿತ ಸದಸ್ಯರನ್ನು ಒಳಗೊಂಡ ವಿಧಾನಸಭೆ ಅದಕ್ಕೂ ಮೊದಲು ರಚನೆ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT