ಗುರುವಾರ , ಆಗಸ್ಟ್ 5, 2021
21 °C

ಪೂರ್ವ ಲಡಾಖ್‌: ಚೀನಾದ ಇನ್ನಷ್ಟು ಸೇನೆ ವಾಪಸು

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಪೂರ್ವ ಲಡಾಖ್‌ನ‌ ಪಾಂಗೊಂಗ್ ತ್ಸೊ ಭಾಗದಿಂದ ಚೀನಾದ ಸೇನೆಯು ಇನ್ನಷ್ಟು ತುಕಡಿಯನ್ನು ಹಾಗೂ ಪಾಂಗೊಂಗ್‌ ನದಿಯಿಂದ ಕೆಲ ದೋಣಿಗಳನ್ನು ವಾಪಸು ಕರೆಸಿಕೊಂಡಿದೆ. 

ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಸಹಜ ಪರಿಸ್ಥಿತಿ ಮೂಡಿಸುವ ರೂಪುರೇಷೆ ಅಂತಿಮಗೊಳಿಸಲು ಲೆಫ್ಟಿನಂಟ್‌ ಜನರಲ್‌ ಹಂತದ ನಡುವೆ ಇನ್ನೊಂದು ಸುತ್ತಿನ ಮಾತುಕತೆಗೆ ಸಿದ್ಧತೆ ನಡೆದಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಚೀನಾ ಮತ್ತು ಭಾರತ ಸೇನೆಯ ಯೋಧರ ನಡುವೆ ನಡೆದಿದ್ದ ಜಟಾಪಟಿ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿ ತಲೆತೋರಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು