ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶೆ, ಖಿನ್ನತೆಗೆ ಒಳಗಾದ ಕಾಂಗ್ರೆಸ್‌ ಟ್ವೀಟ್‌ಗೆ ಸೀಮಿತವಾಗಿದೆ: ಜಾವಡೇಕರ್‌

Last Updated 21 ಜುಲೈ 2020, 9:46 IST
ಅಕ್ಷರ ಗಾತ್ರ

ನವದೆಹಲಿ: ‘ಕಾಂಗ್ರೆಸ್‌ ಜನಪರವಾದ ಯಾವುದೇ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಸದ್ಯದಲ್ಲೇ ಆ ಪಕ್ಷವು ‘ಟ್ವೀಟ್‌’ಗೆ ಸೀಮಿತವಾಗಿ ಉಳಿಯಲಿದೆ’ ಎಂದು ಬಿಜೆಪಿ ಗೇಲಿ ಮಾಡಿದೆ.

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಈಚಿನ ಕೆಲವು ದಿನಗಳಿಂದ ಟ್ವೀಟ್‌ ಮೂಲಕ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದಕ್ಕೆ ಬಿಜೆಪಿ ಈ ರೀತಿ ಪ್ರತಿಕ್ರಿಯೆ ನೀಡಿದೆ.

‘ಫೆಬ್ರುವರಿ ತಿಂಗಳಲ್ಲಿ ಶಹೀನ್‌ಬಾಗ್‌ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಮತ್ತು ದೆಹಲಿ ದಂಗೆಗಳು, ಮಾರ್ಚ್‌ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷತ್ಯಾಗ, ಏಪ್ರಿಲ್‌ನಲ್ಲಿ ವಲಸೆ ಕಾರ್ಮಿಕರ ಚಿತಾವಣೆ ಇವು ಕಾಂಗ್ರೆಸ್‌ನ ಇತ್ತೀಚಿನ ಸಾಧನೆಗಳು. ಮೇ ತಿಂಗಳಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರ ಕಳೆದುಕೊಂಡ ಆರನೇ ವರ್ಷಾಚರಣೆ ನಡೆಸಿದ್ದರೆ, ಜೂನ್‌ ತಿಂಗಳಲ್ಲಿ ಗಡಿ ಸಂಘರ್ಷದಲ್ಲಿ ಚೀನಾದ ನಡೆಯನ್ನು ಸಮರ್ಥಿಸಿಕೊಂಡಿತು. ಜುಲೈ ತಿಂಗಳಲ್ಲಿ ರಾಜಸ್ಥಾನದಲ್ಲೂ ಪಕ್ಷ ಅವಸಾನಹೊಂದಿತು’ ಎಂದು ಕೇಂದ್ರದ ಸಚಿವ ಪ್ರಕಾಶ್‌ ಜಾವಡೇಕರ್‌ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಲೇವಡಿ ಮಾಡಿದರು.

‘ರಾಹುಲ್ ಗಾಂಧಿ ಅವರು ಕೇಂದ್ರದ ವಿರುದ್ಧ ಪ್ರತಿನಿತ್ಯ ಟ್ವೀಟ್‌ ಮಾಡುತ್ತಾರೆ. ನಿರಾಶೆ ಮತ್ತು ಖಿನ್ನತೆಗೆ ಒಳಗಾದ ಪಕ್ಷವು ಸರ್ಕಾರದ ಮೇಲೆ ದಾಳಿ ನಡೆಸುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ. ಆದರೆ ಜನರು ಮೋದಿಯ ಜತೆಗಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಅಸಹಾಯಕವಾಗಿದೆ ’ ಎಂದು ಜಾವಡೇಕರ್‌ ಹೇಳಿದರು.

ಇದಕ್ಕೂ ಮುನ್ನ, ಪ್ರಧಾನಿ ಮೋದಿ ಸಾಧನೆಗಳನ್ನು ಟೀಕಿಸಿ ಟ್ವೀಟ್‌ ಮಾಡಿದ್ದ ರಾಹುಲ್‌, ‘ಫೆಬ್ರುವರಿಯಲ್ಲಿ ‘ನಮಸ್ತೆ ಟ್ರಂಪ್‌’, ಮಾರ್ಚ್‌ನಲ್ಲಿ ಮಧ್ಯಪ್ರದೇಶ ಸರ್ಕಾರವನ್ನು ಉರುಳಿಸಿದ್ದು, ಏಪ್ರಿಲ್‌ನಲ್ಲಿ ಜನರನ್ನು ದೀಪ ಉರಿಸಲು ಹಚ್ಚಿದ್ದು, ಮೇ ತಿಂಗಳಲ್ಲಿ ಸರ್ಕಾರದ ಆರನೇ ವರ್ಷಾಚರಣೆ, ಜೂನ್‌ನಲ್ಲಿ ಬಿಹಾರದಲ್ಲಿ ವರ್ಚುವಲ್‌ ರ್‍ಯಾಲಿ, ಜುಲೈಯಲ್ಲಿ ರಾಜಸ್ಥಾನ ಸರ್ಕಾರ ಉರುಳಿಸುವ ಪ್ರಯತ್ನ’ ಇದಕ್ಕಾಗಿಯೇಸ ಕೊರೊನಾ ವಿರುದ್ಧದ ಹೋರಾಟದಲ್ಲಿ ‘ಆತ್ಮನಿರ್ಭರವಾಗಿದೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT