ನವದೆಹಲಿ: ಕಳೆದ 24 ಗಂಟೆಗಳಲ್ಲಿ 24,248ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು 425 ಮಂದಿ ಮೃತರಾಗಿದ್ದಾರೆ.

ಒಂದು ದಿನದಲ್ಲಿದಾಖಲಾದ ಈ ಪ್ರಕರಣಗಳೊಂದಿಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಸೋಮವಾರ ಒಟ್ಟು 7 ಲಕ್ಷದ ಸಮೀಪ ತಲುಪಿದೆ. ಸಾವಿನ ಸಂಖ್ಯೆ 19,693ಕ್ಕೆ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಸತತ ನಾಲ್ಕನೇ ದಿನ 20 ಸಾವಿರ ಪ್ರಕರಣಗಳು ಒಂದು ದಿನದಲ್ಲಿ ದಾಖಲಾಗಿವೆ. ದೇಶದಲ್ಲಿರುವ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 6,97,413.

ಸೋಂಕಿತರು ಗುಣಮುಖರಾಗಿರುವ ಪ್ರಕರಣಗಳು 4,24,432. ಸಕ್ರಿಯ ಪ್ರಕರಣಗಳು 2,53,287 ಇದೆ. ಒಟ್ಟಾರೆ ಶೇಕಡಾ 60.85ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ದೃಢಪಟ್ಟ ಪ್ರಕರಣಗಳಲ್ಲಿ ವಿದೇಶಿ ಪ್ರಜೆಗಳೂ ಸೇರಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಈ ತಿಂಗಳ 5ರವರೆಗೆ ಒಟ್ಟು 99,69,662 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಭಾನುವಾರ ಒಂದೇ ದಿನ 1,80,596 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಐ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.