ಮಂಗಳವಾರ, ಆಗಸ್ಟ್ 3, 2021
28 °C

Covid-19 India update | ಒಂದೇ ದಿನ 28,637 ಪ್ರಕರಣ, 551 ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Covid-19

ನವದೆಹಲಿ: ದೇಶದಾದ್ಯಂತ ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಗಿನ ನಡುವಣ ಅವಧಿಯಲ್ಲಿ 28,637 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 551 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,49,553ಕ್ಕೆ ಏರಿಕೆಯಾಗಿದೆ. ಈವರೆಗೆ 22,674 ಸಾವು ಸಂಭವಿಸಿದ್ದು, 5,34,621 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2,92,258 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,46,600 ತಲುಪಿದೆ. ಅಲ್ಲಿ ಸದ್ಯ 99,499 ಸಕ್ರಿಯ ಪ್ರಕರಣಗಳಿವೆ. 1,36,985 ಸೋಂಕಿತರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 10,116ಕ್ಕೆ ಏರಿಕೆಯಾಗಿದೆ.

ತಮಿಳುನಾಡಿನಲ್ಲಿ ಈವರೆಗೆ 1,34,226 ಜನರಿಗೆ ಸೋಂಕು ತಗುಲಿದ್ದು, 1,898 ಮಂದಿ ಸಾವಿಗೀಡಾಗಿದ್ದಾರೆ. 85,915 ಸೋಂಕಿತರು ಚೇತರಿಸಿಕೊಂಡಿದ್ದಾರೆ. 46,413 ಸಕ್ರಿಯ ಪ್ರಕರಣಗಳಿವೆ.

ದೆಹಲಿಯಲ್ಲಿ ಈವರೆಗೆ 1,10,921 ಪ್ರಕರಣಗಳು ಪತ್ತೆಯಾಗಿದ್ದು, 3,334 ಮಂದಿ ಮೃತಪಟ್ಟಿದ್ದಾರೆ. ಸದ್ಯ 19,895 ಸಕ್ರಿಯ ಪ್ರಕರಣಗಳಿವೆ.

ಕರ್ನಾಟಕದಲ್ಲಿ ದೆಹಲಿಗಿಂತಲೂ ವೇಗವಾಗಿ ಸೋಂಕು ಹರಡುತ್ತಿದೆ. ಕೇಂದ್ರ ಸರ್ಕಾರದ ಮಧ್ಯ ಪ್ರವೇಶದ ಬಳಿಕ ದೆಹಲಿಯಲ್ಲಿ ಕೋವಿಡ್‌ ನಿರ್ವಹಣೆಯು ಉತ್ತಮಗೊಂಡಿದೆ. ಕರ್ನಾಟಕದಲ್ಲಿ ಶನಿವಾರ 2,798 ಮತ್ತು ಭಾನುವಾರ 2,627 ಪ್ರಕರಣಗಳು ದೃಢಪಟ್ಟಿವೆ. ದೆಹಲಿಯಲ್ಲಿ ಈ ಸಂಖ್ಯೆ ಕ್ರಮವಾಗಿ 1,781 ಮತ್ತು 1,573.

ಹೆಚ್ಚಿದ ಗುಣಮುಖ ಪ್ರಮಾಣ: ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ನಿರಂತರವಾಗಿ ಹೆಚ್ಚುತ್ತಲೇ ಇದೆ. ಗುಣಮುಖ ಪ್ರಮಾಣವು ಶೇ 62.93ಕ್ಕೆ ಏರಿದೆ. ಈಗ ದೇಶದಲ್ಲಿ ಇರುವ ಕೋವಿಡ್‌ ಸಕ್ರಿಯ ಪ‍್ರಕರಣಗಳ ಸಂಖ್ಯೆ 2,92,258 ಎಂದು ಸಚಿವಾಲಯ ಹೇಳಿದೆ. 

ಭಾನುವಾರ ಬೆಳಗ್ಗಿನವರೆಗಿನ 24 ತಾಸುಗಳಲ್ಲಿ ಗುಣಮುಖರಾದವರ ಸಂಖ್ಯೆ 19,235. ಈವರೆಗೆ ಗುಣಮುಖ ಆದವರು 5,34,620. 

ಇದನ್ನೂ ಓದಿ:​ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು