ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update | 54,736 ಹೊಸ ಕೋವಿಡ್-19 ಪ್ರಕರಣ ದೃಢ, 853 ಮಂದಿ ಸಾವು

Last Updated 2 ಆಗಸ್ಟ್ 2020, 4:55 IST
ಅಕ್ಷರ ಗಾತ್ರ

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 54,736 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 853 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ 17,50,724 ಮಂದಿಗೆ ಸೋಂಕು ತಗುಲಿದ್ದು, 37,364 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ 11,45,630 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 5,67,730 ಸಕ್ರಿಯ ಪ್ರಕರಣಗಳು ಇವೆ.

ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ 4,22,118 ಜನರಿಗೆ ಸೋಂಕು ತಗುಲಿದೆ. 1,50,966 ಸಕ್ರಿಯ ಪ್ರಕರಣಗಳೊಂದಿಗೆ ಇದುವರೆಗೆ 2,56,158 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ ಒಟ್ಟಾರೆ 14,994 ಮಂದಿ ಕೋವಿಡ್-19ನಿಂದ ಮೃತಪಟ್ಟಿದ್ದಾರೆ.

ತಮಿಳುನಾಡಿನಲ್ಲಿ ಈವರೆಗೂ 2,45,859 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, 1,83,956 ಮಂದಿ ಗುಣಮುಖರಾಗಿದ್ದಾರೆ. 57,968 ಸಕ್ರಿಯ ಪ್ರಕರಣಗಳಿದ್ದು, 3,935 ಮಂದಿ ಕೊರೊನಾ ವೈರಸ್‌ನಿಂದಾಗಿ ಸಾವಿಗೀಡಾಗಿದ್ದಾರೆ.

ಇತ್ತ ರಾಜಧಾನಿ ದೆಹಲಿಯಲ್ಲಿ 1,35,598 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದುವರೆಗೆ 3,963 ಮಂದಿ ಕೊನೆಯುಸಿರೆಳೆದಿದ್ದಾರೆ. 10,705 ಸಕ್ರಿಯ ಪ್ರಕರಣಗಳೊಂದಿಗೆ 1,20,930 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಗುಜರಾತಿನಲ್ಲಿ ಈವರೆಗೂ 61,438 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, 44,907ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 14,090 ಸಕ್ರಿಯ ಪ್ರಕಗಳೊಂದಿಗೆ ಒಟ್ಟಾರೆ 2,441 ಜನರು ಮೃತಪಟ್ಟಿದ್ದಾರೆ.

ಆಂದ್ರ ಪ್ರದೇಶದಲ್ಲೂ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಈವರೆಗೂ 1,40,933 ಜನರಿಗೆ ಸೋಂಕು ತಗುಲಿದೆ. 75,720 ಸಕ್ರಿಯ ಪ್ರಕರಣಗಳೊಂದಿಗೆ 63,864 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ 1,349 ಜನರು ಸಾವಿಗೀಡಾಗಿದ್ದಾರೆ.

ಇನ್ನುಳಿದಂತೆ ಪಶ್ಚಿಮ ಬಂಗಾಳದಲ್ಲಿ 1,581, ಉತ್ತರ ಪ್ರದೇಶದ 1,630, ಮಧ್ಯ ಪ್ರದೇಶದ 867 ಮತ್ತು ರಾಜಸ್ಥಾನದಲ್ಲಿ 674 ಜನರು ಕೊರೊನಾ ವೈರಸ್‌ನಿಂದ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT