ಶುಕ್ರವಾರ, ಜೂನ್ 25, 2021
22 °C

ಉತ್ತರ ಪ್ರದೇಶ | ರಕ್ಷಾ ಬಂಧನ್ ದಿನದಂದು ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು (ಯುಪಿಎಸ್‌ಆರ್‌ಟಿಸಿ) ‘ರಕ್ಷಾ ಬಂಧನ್‌’ ದಿನದಂದು ತನ್ನ ಎಲ್ಲ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ.

ಈ ನಿರ್ಧಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶನಿವಾರ ಘೋಷಿಸಿದ್ದು, ಉಚಿತ ಪ್ರಯಾಣ ಸೌಲಭ್ಯವು ಆಗಸ್ಟ್‌ 2ರ (ಭಾನುವಾರ) ಮಧ್ಯರಾತ್ರಿಯಿಂದ ಆಗಸ್ಟ್‌ 3ರ (ಸೋಮವಾರ) ಮಧ್ಯರಾತ್ರಿವರೆಗೆ ಜಾರಿಯಲ್ಲಿರಲಿದೆ.

ಆಚರಣೆ ಸಲುವಾಗಿ ರಾಖಿ ಹಾಗೂ ಸಿಹಿತಿಂಡಿ ಮಾರಾಟ ಮಳಿಗೆಗಳು ಭಾನುವಾರ ತೆರೆದಿರುತ್ತವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಗಸ್ತು ಕಾರ್ಯಾಚರಣೆ ಹೆಚ್ಚಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಈ ವರ್ಷ ಆಗಸ್ಟ್ 3 ರಂದು ‘ರಕ್ಷಾ ಬಂಧನ್‌’ ಆಚರಿಸಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು