ಸೋಮವಾರ, ಸೆಪ್ಟೆಂಬರ್ 28, 2020
25 °C

ಗುಜರಾತ್‌: ಖಾಸಗಿ ಶಾಲೆಗಳಿಂದ ಅನಿರ್ದಿಷ್ಟಾವಧಿಗೆ ಆನ್‌ಲೈನ್‌ ತರಗತಿ ಸ್ಥಗಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಶಾಲೆಗಳು ಪುನರಾರಂಭ ಆಗುವ ತನಕ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಸಂಗ್ರಹಿಸಬಾರದು ಎಂದು ಗುಜರಾತ್‌ ಸರ್ಕಾರ ಆದೇಶಿಸಿದ ಬೆನ್ನಲ್ಲೇ, ಅಲ್ಲಿನ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ಗುರುವಾರದಿಂದ  ಸ್ಥಗಿತಗೊಳಿಸಿವೆ.

ಕಳೆದ ವಾರ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ, ಖಾಸಗಿ ಶಾಲೆಗಳು 2020–21ನೇ ಸಾಲಿನ ಶುಲ್ಕವನ್ನು ಏರಿಸುವಂತಿಲ್ಲ ಹಾಗೂ ವಿದ್ಯಾರ್ಥಿಗಳಿಂದ ಶುಲ್ಕವನ್ನು ಸಂಗ್ರಹಿಸುವಂತಿಲ್ಲ ಎಂದು ಹೇಳಿತ್ತು.

ಸರ್ಕಾರದ ಈ ನಡೆಯಿಂದ ಬೇಸರಗೊಂಡಿರುವ ರಾಜ್ಯದ ಸುಮಾರು 15 ಸಾವಿರ ಖಾಸಗಿ ಶಾಲೆಗಳು ಗುರುವಾರದಿಂದ ಆನ್‌ಲೈನ್‌ ತರಗತಿಗಳನ್ನು ಸ್ಥಗಿತಗೊಳಿಸಿವೆ. ಈ ಕುರಿತು ಬಹುತೇಕ ಶಾಲೆಗಳು, ವಿದ್ಯಾರ್ಥಿಗಳ ಪೋಷಕರಿಗೆ ಬುಧವಾರ ರಾತ್ರಿ ಎಸ್‌ಎಂಎಸ್‌ ಮೂಲಕ ಮಾಹಿತಿ ರವಾನಿಸಿವೆ.

‘ಆನ್‌ಲೈನ್‌ ತರಗತಿಗಳು ಮಕ್ಕಳಿಗೆ ಸಹಕಾರಿಯಲ್ಲ ಎಂಬುದು ಸರ್ಕಾರದ ಅಭಿಪ್ರಾಯ. ಹಾಗಿದ್ದಲ್ಲಿ ಈ ರೀತಿ ಮಕ್ಕಳಿಗೆ ಬೋಧಿಸುವುದರಲ್ಲಿ ಅರ್ಥವಿಲ್ಲ. ಸರ್ಕಾರ ತನ್ನ ಆದೇಶ ಹಿಂಪಡೆಯುವ ತನಕ ಆನ್‌ಲೈನ್‌ ತರಗತಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಯ ವಕ್ತಾರ ದೀಪಕ್‌ ರಾಜ್ಯಗುರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು