ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶಕ್ಕೆ 10 ಬ್ರಾಡ್ ಗೇಜ್ ರೈಲ್ವೆ ಎಂಜಿನ್ ನೆರವು

Last Updated 25 ಜುಲೈ 2020, 10:42 IST
ಅಕ್ಷರ ಗಾತ್ರ

ನವದೆಹಲಿ: ನೆರೆಯ ಬಾಂಗ್ಲಾದೇಶದಲ್ಲಿ ರೈಲ್ವೆ ಪ್ರಯಾಣ ಸೌಲಭ್ಯ ಉತ್ತಮಪಡಿಸಲು 10 ಬ್ರಾಡ್ ಗೇಜ್ ಡೀಸೆಲ್ ರೈಲ್ವೆ ಎಂಜಿನ್ ಅನ್ನು ಭಾರತ ಸೋಮವಾರ ನೀಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಎಂಜಿನ್‌ಗಳ ಹಸ್ತಾಂತರ ಸಂದರ್ಭದಲ್ಲಿ ಉಭಯ ದೇಶಗಳ ಪ್ರಮುಖರು ಹಾಜರಿರುವರು. ಕಾರ್ಯಕ್ರಮ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ಇಲಾಖೆಯು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.

ಹಾಜರಿರುವ ಪ್ರಮುಖರಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು, ರೈಲ್ವೆ ಸಚಿವರು, ರಾಯಭಾರಿಗಳು, ರೈಲ್ವೆ ಮಂಡಳಿ ಅಧ್ಯಕ್ಷರು ಸೇರಿದಂತೆ ಇತರೆ ಅಧಿಕಾರಿಗಳು ಇರುವರು. ಎಂಜಿನ್‌ಗಳ ಹಸ್ತಾಂತರ ಪ್ರಕ್ರಿಯೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಗೆಡೆ ರೈಲ್ವೆ ನಿಲ್ದಾಣದಲ್ಲಿ ನಡೆಯಲಿದೆ. ಬಾಂಗ್ಲಾದೇಶದ ದರ್ಶನಾ ನಿಲ್ದಾಣದಲ್ಲಿ ಇವುಗಳನ್ನು ಸ್ವೀಕರಿಸಲಾಗುತ್ತದೆ.

ಈ ಎಂಜಿನ್‌ಗಳನ್ನು ಪಡೆಯುವ ಸಂಬಂಧ ಬಾಂಗ್ಲಾದೇಶ ಕಳೆದ ಏಪ್ರಿಲ್ ತಿಂಗಳಿನಲ್ಲಿ ಪ್ರಸ್ತಾಪ ಕಳುಹಿಸಿತ್ತು.

ಒಟ್ಟು 3300 ಅಶ್ವಶಕ್ತಿ ಸಾಮರ್ಥ್ಯದ ಡಬ್ಲ್ಯೂಡಿಎಂ3ಡಿ ಎಂಜಿನ್‌ಗಳನ್ನು ಬಾಂಗ್ಲಾದೇಶಕ್ಕೆ ನೀಡಲಾಗಿದ್ದು, ಇವುಗಳ ಬಾಳಿಕೆ ಅವಧಿ 28 ವರ್ಷಗಳಿಗೂ ಅಧಿಕ. ಗಂಟೆಗೆ 120 ಕಿ.ಮೀ ವೇಗದಲ್ಲಿ ಕ್ರಮಿಸುವಂತೆ ಇವುಗಳನ್ನು ವಿನ್ಯಾಸ ಮಾಡಲಾಗಿದೆ. ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳ ಸೇವೆಗೆ ಇದು ಸೂಕ್ತವಾಗಿದೆ ಎಂದು ಇಲಾಖೆಯು ಹೇಳಿಕೆಯಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT