ಕೊಯಮತ್ತೂರ್: ಇಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರ ‘ಭೈರವ’ ವರ್ಣಚಿತ್ರ ಆನ್ಲೈನ್ ಹರಾಜಿನಲ್ಲಿ ₹ 5.1 ಕೋಟಿ ಗಳಿಸಿದೆ.

ಸದ್ಗುರು ಅವರ ಪ್ರೀತಿಯ ‘ಭೈರವ’ ಎಂಬ ಹೆಸರಿನ ಗೂಳಿ ಏಪ್ರಿಲ್ ಕೊನೆವಾರದಲ್ಲಿ ತೀರಿಕೊಂಡಿತ್ತು. ಇದರ ನೆನಪಿನಲ್ಲಿ ಸದ್ಗುರು ಅವರು ಈ ವರ್ಣಚಿತ್ರವನ್ನು ರಚಿಸಿದ್ದರು.ಒಂದು ತಿಂಗಳ ಹಿಂದೆ ಈ ವರ್ಣಚಿತ್ರವನ್ನು ಹರಾಜಿಗೆ ಇಡಲಾಗಿತ್ತು. ಸೋಮವಾರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಹರಾಜಿನಲ್ಲಿ ಗಳಿಸಿದ ಈ ಹಣವನ್ನು ಫೌಂಡೇಷನ್ನ ಸೇವಾ ಕಾರ್ಯಗಳಿಗೆ ಬಳಸಿಕೊಳ್ಳುವುದಾಗಿ ಮಂಗಳವಾರ ಸಂಸ್ಥೆ ಹೇಳಿಕೆ ನೀಡಿದೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಈ ಸಂಕಷ್ಟದ ಹೊತ್ತಿನಲ್ಲಿ ಮುಂದೆನಿಂತು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷಾ ಸಾಧನ. ಐಸೋಲೇಷನ್ ವಾರ್ಡ್ಗಳಿಗೆ ಮೂಲಸೌಕರ್ಯ ಕಲ್ಪಿಸಲು ನೆರವು. ತಮಿಳುನಾಡಿನ ಗ್ರಾಮೀಣ ಭಾಗದ ಜನರಿಗೆ ನಿತ್ಯ ಊಟದ ವ್ಯವಸ್ಥೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪಾನೀಯ ವಿತರಣೆಗೆ ಈ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.