ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್‌ ವಿ.ವಿಯಿಂದ ಫೆಲೋಶಿಪ್

Last Updated 21 ಜುಲೈ 2020, 15:57 IST
ಅಕ್ಷರ ಗಾತ್ರ

ನವದೆಹಲಿ: 2020ನೇ ಸಾಲಿನ ವಿಶ್ವವಿದ್ಯಾಲಯದ ಪದವೀಧರರಿಗಾಗಿ ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯವು ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಮಟ್ಟದಲ್ಲಿ 100 ಫೆಲೋಶಿಪ್‌ಗಳನ್ನು ನೀಡುವುದಾಗಿ ಘೋಷಿಸಿದೆ.

‘ಟೀಚಿಂಗ್ ಅಂಡ್ ರಿಸರ್ಜ್ ಇಂಟಲೆಕ್ಚ್ಯುಯೆಲ್ ಪರ್ಸ್ಯೂಟ್ (ಟಿಆರ್‌ಪಿಐ) ಫೆಲೋಶಿಪ್, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಎರಡು ವರ್ಷಗಳ ಫೆಲೋಶಿಪ್ ಕಾರ್ಯಕ್ರಮವನ್ನು ನಡೆಸಲಿದೆ’ ಎಂದು ಜಿಂದಾಲ್ ವಿಶ್ವವಿದ್ಯಾಲಯವು ತಿಳಿಸಿದೆ.

ಕೋವಿಡ್‌–19ನಿಂದಾಗಿ ವಿದ್ಯಾರ್ಥಿಗಳ ವೃತ್ತಿಜೀವನದ ಮೇಲೆ ಅನಿಶ್ಚಿತತೆ ಉಂಟಾಗಿದ್ದು, ಅವುಗಳ ನಿವಾರಣೆಗಾಗಿ ಟಿಆರ್‌ಪಿಐ ಫೆಲೋಶಿಪ್ 2020ರ ಬ್ಯಾಚಿನ ಪದವೀಧರರಿಗೆ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ ಮಾಡಲು ಆರ್ಥಿಕವಾಗಿ ನೆರವಾಗಲಿದೆ.

‘ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯವು ಕಠಿಣ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ’ ಎಂದು ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿ ಪ್ರೊ.ಸಿ.ರಾಜ್‌ಕುಮಾರ್ ಹೇಳಿದ್ದಾರೆ.

ಟಿಆರ್‌ಪಿಐ ಫೆಲೋಶಿಪ್ ಎರಡು ವರ್ಷಗಳ ಅವಧಿಯದ್ದಾಗಿದ್ದು, 2020ರ ಅಕ್ಟೋಬರ್‌ನಿಂದ ಆರಂಭವಾಗಲಿದೆ. ಫೆಲೋಶಿಪ್‌ಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT