ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಯೋಧರಿಗೆ ಚಿನ್ನದ ಗೌರವ: ಸಹಕಾರಿಗಳ ನೆರವಿನಿಂದ ಆಸ್ಪತ್ರೆಗಳು ಮೇಲ್ದರ್ಜೆಗೆ

ಮುಂಬೈ ಮಾದರಿ
Last Updated 7 ಜುಲೈ 2020, 3:22 IST
ಅಕ್ಷರ ಗಾತ್ರ

ಮುಂಬೈ: ಕೊರೊನಾ ಪಿಡುಗಿನಿಂದ ತತ್ತರಿಸಿರುವ ಮುಂಬೈ ಮಹಾನಗರದಲ್ಲಿ ಧಾರ್ಮಿಕ ನಾಯಕರು ಮತ್ತು ಸಹಕಾರಿಗಳು ಜನರ ನೆರವಿಗೆ ಧಾವಿಸಿದ್ದಾರೆ. ಆಸ್ಪತ್ರೆಗಳಲ್ಲಿ ಹಾಲಿ ಅಸ್ತಿತ್ವದಲ್ಲಿರುವ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ. ಸರ್ಕಾರದೊಂದಿಗೆ ಹೆಗಲು ನೀಡುವ ಜೊತೆಗೆ, ಮುಂಚೂಣಿಯಲ್ಲಿ ನಿಂತು ಪಿಡುಗಿನ ವಿರುದ್ಧ ಜನರನ್ನು ಕಾಪಾಡಲು ಯತ್ನಿಸುತ್ತಿರುವ ಕೊರೊನಾ ಯೋಧರಿಗೆ ಗೌರವ ಸಲ್ಲಿಸುತ್ತಿದ್ದಾರೆ.

ಮುಂಬೈ ಉತ್ತರ ಕ್ಷೇತ್ರದ ಸಂಸದರೂ ಆಗಿರುವ ಬಿಜೆಪಿ ನಾಯಕ ಗೋಪಾಲ್ ಶೆಟ್ಟಿ ಮಂಗಳವಾರಕೊರೊನಾ ವಿರುದ್ಧ ಹೋರಾಡುತ್ತಿರುವ 30 ಮಂದಿಯನ್ನು ತಲಾ 5,000 ರೂಪಾಯಿ ನಗದು ಮತ್ತು ಒಂದು ಗ್ರಾಂ ಚಿನ್ನದ ಸರ ನೀಡಿ ಗೌರವಿಸಿದರು. ಭದ್ರತಾ ಸಿಬ್ಬಂದಿ, ಪೌರಕಾರ್ಮಿಕರು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ಸಿಬ್ಬಂದಿಯೂ ಪುರಸ್ಕೃತರಲ್ಲಿ ಸೇರಿದ್ದರು.

ಬೊರಿವಲಿಯಲ್ಲಿ ಸತ್ರಾ ಪಾರ್ಕ್ ಗೃಹ ನಿರ್ಮಾಣ ಸಹಕಾರ ಸಂಘ ಅಭಿನಂದನಾ ಸಮಾರಂಭ ಆಯೋಜಿಸಿತ್ತು. ಸಂಘವು ಆರಂಭಿಸಿರುವ 12 ಹಾಸಿಗೆ ಸಾಮರ್ಥ್ಯದಕೋವಿಡ್ ಕೇರ್ ಕೇಂದ್ರವನ್ನೂ ಶೆಟ್ಟಿ ಇದೇ ಸಂದರ್ಭ ಉದ್ಘಾಟಿಸಿದರು.

'ತಮ್ಮ ಸಂಘಗಳ ಕಚೇರಿಆವರಣಗಳಲ್ಲಿಖಾಸಗಿ ಆಸ್ಪತ್ರೆ ಸ್ಥಾಪಿಸಲುಮುಂಬೈ ಆಡಳಿತವು ಖಾಸಗಿ ಗೃಹ ನಿರ್ಮಾಣ ಸಂಘಗಳಿಗೆ ಅವಕಾಶ ನೀಡಬೇಕು' ಎಂದು ಶೆಟ್ಟಿಇದೇ ಸಂದರ್ಭ ಮನವಿ ಮಾಡಿದರು. 'ಕೊರೊನಾ ಪಿಡುಗಿನ ಈ ಸಮಯದಲ್ಲಿ ನಮ್ಮಿಂದ ಸಾಧ್ಯವಾಗುವ ಎಲ್ಲ ರೀತಿಯಲ್ಲಿಯೂ ನಾವು ಜನರಿಗೆ ನೆರವಾಗಬೇಕು. ಒಗ್ಗೂಡಿ ಸಕಾರಾತ್ಮಕ ಕೆಲಸಗಳು ನಮ್ಮನ್ನು ಸಮಷ್ಟಿ ಹಿತದತ್ತ ಕರೆದೊಯ್ಯುತ್ತದೆ' ಎಂದು ಶೆಟ್ಟಿ ಹೇಳಿದರು.

ಗೃಹ ನಿರ್ಮಾಣ ಸಹಕಾರ ಸಂಘ ಆರಂಭಿಸಿರುವ ಕೋವಿಡ್ ಕೇರ್ ಕೇಂದ್ರದಲ್ಲಿ ಆರು ವೈದ್ಯರು, 8 ಆರ್‌ಎಂಒಗಳು ಮತ್ತು 50 ನರ್ಸಿಂಗ್‌ ಸಿಬ್ಬಂದಿ ಇದ್ದಾರೆ. ಅಗತ್ಯ ವೈದ್ಯಕೀಯ ಉಪಕರಣಗಳ ಜೊತೆಗೆ ಎಕ್ಸ್‌ರೇ ಯಂತ್ರ, ಇಸಿಜಿ ಯಂತ್ರಗಳು ಇವೆ.

ಜೈನ ದೇವಸ್ಥಾನದಲ್ಲಿ ಸ್ಥಾಪಿಸಿರುವ ಕೋವಿಡ್ ಕೇಂದ್ರ ಕೇಂದ್ರಕ್ಕೆ ಜೈನ ಸಮಾಜದ ಧಾರ್ಮಿಕ ನಾಯಕ ನಮ್ರಮುನಿ ಮಹಾರಾಜ್ ಸಹ ಶುಭ ಹಾರೈಸಿದರು.

ಉಚಿವ ಆರೋಗ್ಯ ಸೇವೆ ಒದಗಿಸುವ ಈ ಕೇಂದ್ರವು ಈವರೆಗೆ 325 ರೋಗಿಗಳಿಗೆ ನೆರವಾಗಿದೆ. 200 ಮಂದಿ ಚೇತರಿಸಿಕೊಂಡಿದ್ದಾರೆ. 22 ಮಂದಿ ಇಂದಿಗೂ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ವೆಂಟಿಲೇಟರ್‌ ನೆರವಿನಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂಬೈನಹಲವು ಆಸ್ಪತ್ರೆಗಳಲ್ಲಿ ಹೆಚ್ಚುವರಿ ಕೋವಿಡ್ ವಾರ್ಡ್‌ ಸ್ಥಾಪಿಸಲು ಸಂಘ ಸಂಸ್ಥೆಗಳು ಮತ್ತು ಧಾರ್ಮಿಕ ನಾಯಕರು ನೆರವಾಗಿದ್ದಾರೆ. ದಹಿಸಾರ್ (47), ಪಂಜಾಬಿ ಗಲ್ಲಿ, ಬೊರಿವಲಿ ಪಶ್ಚಿಮ (120), ಇಎಸ್‌ಐಸಿ ಆಸ್ಪತ್ರೆ (250) ಮತ್ತು ಭಗವತಿ (80) ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬೆಡ್‌ಗಳನ್ನು ಹಾಕಲಾಗಿದೆ.

'ಹಲವು ಸಂಘ ಸಂಸ್ಥೇಗಳ ನೆರವಿನಿಂದ ಈ ಆಸ್ಪತ್ರೆಗಳಲ್ಲಿ ಮೌಲ ಸೌಕರ್ಯವನ್ನು ಉನ್ನತೀಕರಿಸಲಾಗಿದೆ. ಕೊರೊನಾ ಪಿಡುಗಿನಿಂದ ತತ್ತರಿಸಿರುವ ಉತ್ತರ ಮುಂಬೈನಲ್ಲಿ ಹಗಲಿರುಳು ಸೇವೆ ಒದಗಿಸಲು ಸಾಧ್ಯವಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಜೊತೆಗೆ ಈ ಕೇಂದ್ರಗಳಿಗೂ ಜನರು ಭೇಟಿ ನೀಡಿ ವೈದ್ಯಕೀಯ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಸಕಾಲದಲ್ಲಿ ಸೇವೆ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ' ಎಂದು ಗೋಪಾಲ್ ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT