ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರವ್‌ ಮೋದಿಯ ₹ 329 ಕೋಟಿ ಆಸ್ತಿ ಮುಟ್ಟುಗೋಲು

Last Updated 8 ಜುಲೈ 2020, 19:36 IST
ಅಕ್ಷರ ಗಾತ್ರ

ನವದೆಹಲಿ: ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ ₹ 329.66 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ನಗರದ ವರ್ಲಿ ಪ್ರದೇಶದ ಸಮುದ್ರ ಮಹಲ್‌ ಕಟ್ಟದಲ್ಲಿರುವ ನಾಲ್ಕು ವಸತಿ ಸಮುಚ್ಛಯ, ಅಲೀಬಾಗ್‌‌ನಲ್ಲಿರುವ ಫಾರ್ಮ್‌ ಹೌಸ್‌ ಮತ್ತು ನಿವೇಶನ, ಜೈಸಲ್ಮೇರ್‌ನಲ್ಲಿನ ವಿಂಡ್ ಮಿಲ್, ಲಂಡನ್ ನಲ್ಲಿರುವ ಫ್ಲ್ಯಾಟ್, ಯುಎಇನಲ್ಲಿರುವ ವಸತಿ ಸಮುಚ್ಛಯ‌, ಷೇರು ಮತ್ತು ಬ್ಯಾಂಕ್‌ ಠೇವಣಿಗಳನ್ನು ಜಪ್ತಿ ಮಾಡಲಾಗಿದೆ.

ನೀರವ್‌ ಮೋದಿಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಳೆದ ಜೂನ್‌ 8 ರಂದು ಮುಂಬೈನ ವಿಶೇಷ ನ್ಯಾಯಾಲಯ ಇ.ಡಿಗೆ ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT