ಶನಿವಾರ, ಸೆಪ್ಟೆಂಬರ್ 26, 2020
23 °C

ಅಸ್ಸಾಂ ಪ್ರವಾಹ: 30 ಜಿಲ್ಲೆಗಳಲ್ಲಿ ಹಾನಿ; 56 ಲಕ್ಷ ಜನರಿಗೆ ಸಂಕಷ್ಟ

ಏಜೆನ್ಶೀಸ್ Updated:

ಅಕ್ಷರ ಗಾತ್ರ : | |

ಗುವಾಹಟಿ: ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದಾಗಿ 30 ಜಿಲ್ಲೆಗಳಲ್ಲಿ ಸಾಕಷ್ಟು ಹಾನಿಯಾಗಿದ್ದು, 56 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 102 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಪ್ರವಾಹ ಸಂತ್ರಸ್ತರಿಗಾಗಿ 615 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಸಂರಕ್ಷಿತರಾಣ್ಯ ಪ್ರದೇಶದಲ್ಲಿ 132 ಪ್ರಾಣಿಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.

‘ಪ್ರವಾಹದಲ್ಲಿ ಸಿಲುಕಿ ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಸಂರಕ್ಷಿತಾರಣ್ಯದ 132 ಪ್ರಾಣಿಗಳು ಮೃತಪಟ್ಟಿವೆ. ಇದರಲ್ಲಿ 14 ಘೇಂಡಾಮೃಗಗಳು, 5 ಕಾಡು ಎಮ್ಮೆಗಳು, 8 ಕಾಡುಹಂದಿಗಳು, 101 ಜಿಂಕೆಗಳು, ಮೂರು ಮುಳ್ಳುಹಂದಿಗಳು ಹಾಗೂ 1 ಹೆಬ್ಬಾವು ಮೃತಪಟ್ಟಿವೆ’ ಎಂದು ಅಸ್ಸಾಂ ಸರ್ಕಾರ ಮಾಹಿತಿ ನೀಡಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ (ಎನ್‌ಡಿಆರ್‌ಎಫ್‌) ಒಂದು ತಂಡ ಪ್ರವಾಹ ಪೀಡಿತ ಬಾರ್‌ಪೆಟಾ ಜಿಲ್ಲೆಯ ದಿಘಿರ್‌ಪಾಮ್‌ ಬಜಾರ್‌ ಪ್ರದೇಶದಿಂದ ಜನ–ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಭಾನುವಾರ ಸ್ಥಳಾಂತರಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು