ಬುಧವಾರ, ಡಿಸೆಂಬರ್ 1, 2021
21 °C

ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಪ್ರದೀಪ್‌ ಸಿಂಗ್‌ ಮೊದಲ ರ್‍ಯಾಂಕ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಯುಪಿಎಸ್‌ಸಿ 2019 ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪ್ರದೀಪ್‌ ಸಿಂಗ್‌ ಮೊದಲ ರ್‍ಯಾಂಕ್ ಪಡೆದಿದ್ದಾರೆ.

ಈ ಬಾರಿ ಒಟ್ಟು 829 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಜತೀನ್‌ ಸಿಂಗ್‌ ಹಾಗೂ ಪ್ರತಿಭಾ ವರ್ಮಾ ಎರಡು ಮತ್ತು ಮೂರನೇ ರ್‍ಯಾಂಕ್ ಪಡೆದಿದ್ದಾರೆ.

ಟಾಪ್ 10 ಪಟ್ಟಿಯಲ್ಲಿ ಮೂವರು ಮಹಿಳೆಯರು ಇದ್ದಾರೆ. 25 ರ್‍ಯಾಂಕ್ ಒಳಗಿನ ಪಟ್ಟಿಯಲ್ಲಿ 9 ಮಂದಿ ಮಹಿಳೆಯರಿದ್ದಾರೆ. ಟಾಪ್ ರ್‍ಯಾಂಕ್ ಪಡೆದವರ ಮಾಹಿತಿಯನ್ನು ಯುಪಿಎಸ್‌ಸಿ ಈವರೆಗೆ ಬಹಿರಂಗ ಪಡಿಸಿಲ್ಲ.

ಆಯ್ಕೆಯಾಗಿರುವ 829 ಮಂದಿಯ ಪೈಕಿ  304 ಮಂದಿ ಸಾಮಾನ್ಯ ವಿಭಾಗ,  78 ಮಂದಿ ಆರ್ಥಿಕವಾಗಿ ಹಿಂದುಳಿದ ವರ್ಗ, 251 ಇತರ ಹಿಂದುಳಿದ ವರ್ಗ ( ಒಬಿಸಿ), 129  ಪರಿಶಿಷ್ಟ ಜಾತಿ ಮತ್ತು  67 ಮಂದಿ ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದಾರೆ.
 
182  ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಕಾಯ್ದಿರಿಸಿದ್ದು 11 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಈ ವೆಬ್‌ಸೈಟ್‌ ಮೂಲಕ ಫಲಿತಾಂಶ ನೋಡಬಹುದು: www.upsc.gov.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು