ಮಂಗಳವಾರ, ಸೆಪ್ಟೆಂಬರ್ 29, 2020
22 °C

ವಕೀಲ ಪ್ರಶಾಂತ್‌ ಭೂಷಣ್‌ ಟ್ವೀಟ್‌ ಅಳಿಸಿದ ಟ್ವಿಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸುಪ್ರೀಂ ಕೋರ್ಟ್‌ ಹಾಗೂ ಮುಖ್ಯನ್ಯಾಯಮೂರ್ತಿ(ಸಿಜೆಐ)ಕಚೇರಿಯ ಘನತೆ ಹಾಗೂ ಅಧಿಕಾರಕ್ಕೆ ಚ್ಯುತಿ ತರುವಂತಹ ವಕೀಲ ಪ್ರಶಾಂತ್‌ ಭೂಷಣ್ ಅವರ ಎರಡು ಟ್ವೀಟ್‌ಗಳನ್ನು ಟ್ವಿಟರ್‌ ತೆಗೆದು ಹಾಕಿದೆ. 

ಟ್ವೀಟ್‌ ವಿರುದ್ಧ ಸುಪ್ರೀಂ ಕೋರ್ಟ್‌ ಪ್ರಶಾಂತ್‌ ಭೂಷಣ್‌ ಅವರಿಗೆ ನಿಂದನೆ ನೋಟಿಸ್‌ ನೀಡಿದ ಬೆನ್ನಲ್ಲೇ ಟ್ವಿಟರ್‌ ಈ ಕ್ರಮ ಕೈಗೊಂಡಿದೆ. ಈ ಟ್ವೀಟ್‌ಗಳು ಪ್ರಸ್ತುತ ಟ್ವಿಟರ್‌ನಲ್ಲಿ ಕಾಣಿಸುತ್ತಿಲ್ಲ. ಜೂನ್‌ 27 ಹಾಗೂ 29ರಂದು ಭೂಷಣ್‌ ಈ ಟ್ವೀಟ್‌ಗಳನ್ನು ಮಾಡಿದ್ದರು. ಇದನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರಿದ್ದ ಪೀಠವು ಜುಲೈ 22ರಂದು ನೋಟಿಸ್‌ ನೀಡಿತ್ತು. ಈ ಟ್ವೀಟ್‌ಗಳನ್ನು ಇನ್ನೂ ಏಕೆ ತೆಗೆದುಹಾಕಿಲ್ಲ ಎಂದು ಟ್ವಿಟರ್‌ ಸಂಸ್ಥೆಯನ್ನು ಪ್ರಶ್ನಿಸಿದ್ದ ಪೀಠ, ಟ್ವಿಟರ್‌ನಿಂದ ಪ್ರತಿಕ್ರಿಯೆ ಕೇಳಿ, ಆಗಸ್ಟ್‌ 5ಕ್ಕೆ ವಿಚಾರಣೆ ಮುಂದೂಡಿತ್ತು. ನ್ಯಾಯಾಲಯವು ಸೂಚಿಸಿದರಷ್ಟೇ ಟ್ವೀಟ್‌ ಒಂದನ್ನು ಅಳಿಸಬಹುದು ಎಂದು ಟ್ವಿಟರ್‌ ಪ್ರತಿಕ್ರಿಯೆ ನೀಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು