ಶನಿವಾರ, ಸೆಪ್ಟೆಂಬರ್ 18, 2021
26 °C

ಚೀನಿ ಆ್ಯಪ್‍ಗಳ ರದ್ದು ಕ್ರಮವೂ ಡಿಜಿಟಲ್‍ ಸ್ಟ್ರೈಕ್‍: ಶಿವಸೇನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಚೀನಾ ಮೂಲದ 59 ಮೊಬೈಲ್‍ ಆ್ಯಪ್‍ಗಳನ್ನು ನಿಷೇದಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಶಿವಸೇನೆ`ಡಿಜಿಟಲ್ ಸ್ಟ್ರೈಕ್‍’ ಎಂದು ಬಣ್ಣಿಸಿದೆ. ಅಲ್ಲದೆ, ಈ ಎಲ್ಲ ಆ್ಯಪ್‍ಗಳು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹವೇ ಆಗಿದ್ದರೆ ಹಲವು ವರ್ಷಗಳಿಂದ ಅವು ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದಾದರೂ ಹೇಗೆ ಎಂದೂ ಪ್ರಶ್ನಿಸಿದೆ.

ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಕುರಿತ ಬರೆದಿರುವ ಸಂಪಾದಕೀಯದಲ್ಲಿ, ‘ರಾಷ್ಟ್ರೀಯ ಭದ್ರತೆಗೆ ಈ ಆ್ಯಪ್ ಗಳು ಧಕ್ಕೆ ತರುತ್ತಿವೆ ಎಂಬ ಅಂಶ ಕೇಂದ್ರ ಸರ್ಕಾರಕ್ಕೆ ಮನವರಿಕೆ ಆದುದು ಯಾವಾಗ ಎಂದು ತಿಳಿಸಬೇಕು’ ಎಂದಿದೆ.

ಆ್ಯಪ್‍ಗಳನ್ನು ನಿಷೇಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇಂಟರ್ ನೆಟ್ ಬಳಕೆದಾರರ ಹಿತಾಸಕ್ತಿಯನ್ನು ರಕ್ಷಿಸಿದ್ದಾರೆ. ಈ ಧೈರ್ಯವನ್ನು ಮೆಚ್ಚಲೇಬೇಕು ಎಂದು ಶಿವಸೇನೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು