ಭಾನುವಾರ, ಆಗಸ್ಟ್ 1, 2021
27 °C

ವಾರಾಣಸಿಯಲ್ಲಿ ಸೋಂಕು ನಿಯಂತ್ರಣ: ಮೋದಿ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಅಗತ್ಯವಿರುವವರಿಗೆ ವಾರಾಣಸಿಯ ಜನರು, ಅಧಿಕಾರಿಗಳು ಮತ್ತು ಎನ್‌ಜಿಒಗಳು ನೀಡಿದ ಕೊಡುಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮೆಚ್ಚುಗೆ ವ್ಯಕ್ತಪಡಿಸಿದರು.

ರೋಗ ಹರಡದಂತೆ ತಡೆಯಲು ಮಾರ್ಗಸೂಚಿಗಳನ್ನು ಜನರು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದೂ ಒತ್ತಾಯಿಸಿದರು.

ವಾರಾಣಸಿ ಮೂಲದ ವಿವಿಧ ಸ್ವಯಂ ಸೇವಾ ಸಂಸ್ಥೆಗಳ  ಪ್ರತಿನಿಧಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು ಕಾಶಿಯು ಕೊರೊನಾ ಸೋಂಕು ಹರಡುವುದನ್ನು ತೀವ್ರವಾಗಿ ನಿಯಂತ್ರಿಸಿದೆ ಎಂದರು.

ಕಾಶಿಯೆಂದೇ ಕರೆಯಲಾಗುವ ವಾರಾಣಸಿ, ಪ್ರಧಾನಿ ಅವರ ಸಂಸದೀಯ ಕ್ಷೇತ್ರವೂ ಆಗಿದೆ.

ಸುಮಾರು 24 ಕೋಟಿ ಜನಸಂಖ್ಯೆ ಇರುವ ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕು ತ್ವರಿತವಾಗಿ ಹರಡುವುದನ್ನು ನಿಯಂತ್ರಿಸಲಾಗಿದೆ. ಸೋಂಕಿತರಾದವರು ಕೂಡ ಬೇಗನೇ ಗುಣಮುಖರಾಗುತ್ತಿದ್ದಾರೆ ಎಂದೂ ಹೇಳಿದರು.

ಬಹುತೇಕ ಇಷ್ಟೇ ಜನಸಂಖ್ಯೆ ಇರುವ ಬ್ರೆಜಿಲ್‌ನಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ. ಆದರೆ ಉತ್ತರಪ್ರದೇಶದಲ್ಲಿ ಸಾವಿನ ಪ್ರಮಾಣ 800ರ ಸಮೀಪ ಬಂದಿದೆ ಎಂದರು.

ಮುಂಬರುವ ದಿನಗಳಲ್ಲಿ ವಾರಾಣಸಿ ‘ಆತ್ಮನಿರ್ಭರ್‌ ಭಾರತ್‌’ ಅಭಿಯಾನದ ಮುಖ್ಯ ಕೇಂದ್ರವಾಗಿ ಮತ್ತು ರಫ್ತು ಕೇಂದ್ರವಾಗಿಯೂ ಹೊರಹೊಮ್ಮಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು