ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸ್ ದುಬೆ ಪರಾರಿಯಾಗಲು ದಾಳಿಯ ಮಾಹಿತಿ ಮೊದಲೇ ನೀಡಿದ ಇಬ್ಬರು ಪೊಲೀಸರ ಬಂಧನ

Last Updated 10 ಜುಲೈ 2020, 10:18 IST
ಅಕ್ಷರ ಗಾತ್ರ

ಲಖನೌ: ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಪರಾರಿಯಾಗಲು ನೆರವಾದ ಆರೋಪದಲ್ಲಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ಕಾನ್ಪುರದ ಚೌಬೆಯಾಪುರ್ ಪೊಲೀಸ್ ಠಾಣೆಯ ಸ್ಟೇಷನ್ ಆಫೀಸರ್ ವಿನಯ್ ತಿವಾರಿ ಮತ್ತು ಎಸ್‌ಐ ಕೆ.ಕೆ. ಶರ್ಮಾ ಅವರೇ ಬಂಧಿತರು.

ಪೊಲೀಸರು ದಾಳಿ ನಡೆಸುವ ಮಾಹಿತಿಯನ್ನು ವಿನಯ್ ತಿವಾರಿ ಮತ್ತು ‌ಕೆ.ಕೆ. ಶರ್ಮಾ ಮೊದಲೇ ದುಬೆಗೆ ತಿಳಿಸಿದ್ದರು ಎನ್ನಲಾಗಿದೆ. ಘಟನೆ ನಡೆದ ಬೆನ್ನಲ್ಲೇ ಇಬ್ಬರನ್ನೂ ಅಮಾನತು ಮಾಡಲಾಗಿದೆ. ಕಳೆದ ಗುರುವಾರ ಮಧ್ಯರಾತ್ರಿ ಪೊಲೀಸರು ವಿಕಾಸ್ ದುಬೆ ಬಂಧನಕ್ಕೆ ದಾಳಿ ನಡೆಸಿದ್ದರು. ಆ ವೇಳೆ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 8 ಮಂದಿ ಪೊಲೀಸರು ಹತರಾಗಿದ್ದರು.

ಬಳಿಕ ವಿಕಾಸ್‌ ದುಬೆ ಬಂಧನಕ್ಕೆ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಈ ಮಧ್ಯೆ, ಹರಿಯಾಣದ ಫರೀದಾಬಾದ್‌ನ ಹೋಟೆಲ್‌ ಒಂದರಲ್ಲಿ ಕಾಣಿಸಿಕೊಂಡಿದ್ದ ದುಬೆ ಪೊಲೀಸರು ಅಲ್ಲಿಗೆ ತಲುಪುವ ಮೊದಲೇ ಪರಾರಿಯಾಗಿರುವುದಾಗಿ ಬುಧವಾರ ವರದಿಯಾಗಿದೆ.

ಬಂಧಿತ ಪೊಲೀಸರ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 120ರ (ಪೊಲೀಸರ ಹತ್ಯೆಗೆ ಸಂಚು) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಕಾನ್ಪುರದ ಎಸ್‌ಎಸ್‌ಪಿ ದಿನೇಶ್ ಕುಮಾರ್ ಪಿ ತಿಳಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT