ಮಂಗಳವಾರ, ಆಗಸ್ಟ್ 3, 2021
26 °C

ಚೀನಾ ಅತಿಕ್ರಮಣ: ಮೋದಿ ವಿರುದ್ಧ ಮತ್ತೆ ರಾಹುಲ್‌ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಮೋದೀಜಿಯ ಆಡಳಿತದಲ್ಲಿ ಏನಾಗಿದೆ ನೋಡಿ, ಭಾರತದ ಪವಿತ್ರ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆ’ ಎಂದು ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪುನಃ ವಾಗ್ದಾಳಿ ಮಾಡಿದ್ದಾರೆ.

‘ಚೀನಾವು ವಾಸ್ತವ ಗಡಿರೇಖೆಯಿಂದ ಹಿಂದೆ ಸರಿದಿದೆ ಎನ್ನುವ ಮೂಲಕ ಸರ್ಕಾರವು ಮಾಧ್ಯಮಗಳ ಹಾದಿ ತಪ್ಪಿಸುತ್ತಿದೆ. ಗಾಲ್ವನ್‌ ಕಣಿವೆಯಿಂದ ಹಿಂದೆ ಸರಿದಿರುವುದರಿಂದ ಭಾರತಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು’ ಎಂದು ರಕ್ಷಣಾ ತಜ್ಞರೊಬ್ಬರನ್ನು ಉಲ್ಲೇಖಿಸಿ ಪತ್ರಿಕೆಯೊಂದು ಮಾಡಿರುವ ವರದಿಯ ತುಣುಕನ್ನು ಟ್ವೀಟ್‌ ಜತೆಗೆ ರಾಹುಲ್‌ ಟ್ಯಾಗ್‌ ಮಾಡಿದ್ದಾರೆ.

 

ಗಾಲ್ವನ್‌ನಲ್ಲಿ ಭಾರತ–ಚೀನಾ ಸಂಘರ್ಷ ನಡೆದ ನಂತರ, ಚೀನಾದ ಅತಿಕ್ರಮಣವನ್ನು ಉಲ್ಲೇಖಿಸಿ ರಾಹುಲ್‌ ಅವರು ಹಲವು ಬಾರಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು