ಅಯ್ಯೊ ಅದೆಂತಾ ಖುಷಿ, ಅಮ್ಮನ ಕೈಯಲ್ಲಿ ಕ್ಯಾಂಡಿ (ಚಾಕೊಲೇಟ್) ನೋಡಿದ್ದೆ ಆ ಮಗಳ ಮೊಗದಲ್ಲಿ ಚಿಮ್ಮಿದ ಮಂದಹಾಸ ಎಂತಹವರ ಮೊಗದಲ್ಲೂ ಸಣ್ಣದೊಂದು ನಗುವಿನ ಕಚಗುಳಿ ಇಡುತ್ತದೆ.

ಚಿಕ್ಕ ಮಕ್ಕಳು ಚಾಕೊಲೇಟ್ ನೋಡಿದ ಕೂಡಲೇ ಖುಷಿಯಾಗುವುದ ಸಾಮಾನ್ಯ ಇದರಲ್ಲೇನು ವಿಶೇಷ ಅಂತೀರಾ? ವಿಷಯ ಇರೋದೆ ಇಲ್ಲಿ. ಇಲ್ಲಿ ಚಾಕೊಲೇಟ್ ಪಡೆದ ಮಗಳ ವಯಸ್ಸು 87.

ಹೌದು 107 ವರ್ಷ ತಾಯಿ ತನ್ನ 87 ವರ್ಷದ ಮಗಳಿಗಾಗಿ ತೆಗೆದುಕೊಂಡು ಬಂದಿದ್ದ ಚಾಕೊಲೇಟ್ ಅನ್ನು ಜಾಕೆಟ್‌ನಿಂದ ತೆಗೆದುಕೊಟ್ಟ ತಕ್ಷಣ ಮಗಳ ಮುಖದಲ್ಲಿ ಮೂಡಿದ ಮಂದಹಾಸದ ವಿಡಿಯೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು ನಡೆದಿರುವುದು ಚೀನಾದಲ್ಲಿ. ಇಲ್ಲಿನ ಮಾಧ್ಯಮವಾದ ಪೀಪಲ್ಸ್ ಡೈಲಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೊವನ್ನು ಪ್ರಕಟಿಸಿಕೊಂಡಿದ್ದು, ‘ಜಗತ್ತಿನ ಅತ್ಯಂತ ಖುಷಿಯ ಮಗಳು’ ಎಂಬ ಒಕ್ಕಣೆಯನ್ನು ನೀಡಿದೆ.
107 ವರ್ಷದ ಆ ತಾಯಿ ಹಾಗೂ ಆಕೆಯ ಮಗಳು ಮದುವೆ ಸಂಭ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಈ ವಿಡಿಯೊ ಚಿತ್ರಿಕರಿಸಲಾಗಿದೆ ಎಂದು ಆ ವರದಿಯಲ್ಲಿ ಹೇಳಲಾಗಿದೆ.

ಈ ವಿಡಿಯೊವನ್ನು ಒಂದು ಸಾವಿರ ಮಂದಿ ರೀಟ್ವೀಟ್ ಮಾಡಿಕೊಂಡಿದ್ದು, 3800 ಮಂದಿ ಕಮೆಂಟ್ ಮಾಡಿದ್ದಾರೆ.ವಿಡಿಯೊ ಶೇರ್ ಮಾಡಿಕೊಂಡಿರುವ ಅನೇಕರು ತಾಯಿ ಮತ್ತು ಮಗಳ ಭಾಂದವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.