ಮಂಗಳವಾರ, ಜೂಲೈ 7, 2020
28 °C

ವಿಮಾನ ಅಪಘಾತ: ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ನಾಲ್ವರು ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ಅಟ್ಲಾಂಟಾ: ಉತ್ತರ ಜಾರ್ಜಿಯಾದ ಓಕೋನಿ ಸರೋವರದ ಬಳಿ ಶುಕ್ರವಾರ ಎರಡು ಎಂಜಿನ್‌ಗಳ ಟರ್ಬೊಪ್ರಾಪ್‌ ವಿಮಾನವು ಅಪಘಾತಕ್ಕೀಡಾಗಿ ಫ್ಲೋರಿಡಾದ ಒಂದೇ ಕುಟುಂಬದ ನಾಲ್ವರು ಮತ್ತು ಪೈಲಟ್ ಸೇರಿ ಐದು ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಸ್ಪಟ್ನಿಕ್ ವರದಿ ಮಾಡಿದೆ.

ಮಾಧ್ಯಮಗಳ ವರದಿ ಪ್ರಕಾರ, ಸಣ್ಣ ವಿಮಾನವು ಇಂಡಿಯಾನಾಕ್ಕೆ ತೆರಳುತ್ತಿತ್ತು. ಅಪಘಾತದಿಂದಾಗಿ 4 ಮತ್ತು 6 ವರ್ಷದ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ಸ್ಥಳೀಯ ಕಾಲಮಾನ ಸಂಜೆ 3.15ಕ್ಕೆ ನಿಯಂತ್ರಣ ಕಳೆದುಕೊಂಡು ವಿಮಾನ ಕೆಳಕ್ಕಿಳಿದ ವಿಮಾನವು, ಈಟನ್‌ಟನ್ ಉತ್ತರ ಪ್ರದೇಶದ ಕಾಡಿನೊಳಗೆ ಪತನವಾಗಿದೆ. ಶೆರಿಫ್ ಹೂವಾರ್ಡ್ ಸಿಲ್ಸ್ ಪ್ರಕಾರ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿಮಾನವು ವಿಲ್ಲಿಸ್ಟನ್ ಫ್ಲೋರಿಡಾದಿಂದ ಇಂಡಿಯಾನಾದ ನ್ಯೂಕ್ಯಾಸ್ಟಲ್‌ ಕಡೆಗೆ ಹಾರುತ್ತಿತ್ತು.

ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯೊಂದಿಗೆ ಫೆಡರಲ್ ವಿಮಾನಯಾನ ಆಡಳಿತ ಅಪಘಾತದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು