ಬುಧವಾರ, ಸೆಪ್ಟೆಂಬರ್ 22, 2021
28 °C

ಅಫ್ಗಾನಿಸ್ತಾನದಲ್ಲಿ ವಿಮಾನ ಪತನ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Ghazni

ಕಾಬೂಲ್: ಮಧ್ಯ ಅಫ್ಗಾನಿಸ್ತಾನ ಪ್ರಾಂತ್ಯದ ಘಜ್ನಿಯಲ್ಲಿ  ಸೋಮವಾರ ಅಫ್ಗಾನಿಸ್ತಾನದ ವಿಮಾನವೊಂದು ಪತನಗೊಂಡಿದೆ. ತಾಲೀಬಾನ್ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು ವಿಮಾನದ ಅವಶೇಷಗಳನ್ನು  ಪತ್ತೆಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

ಅಫ್ಗಾನಿಸ್ತಾನದ  ಅರಿಯಾನ ಅಫ್ಗಾನ್ ವಿಮಾನಸಂಸ್ಥೆಯ ವಿಮಾನ ಪತನಗೊಂಡಿದೆ ಎಂದು ಸರ್ಕಾರದ ಮೂವರು ಅಧಿಕಾರಿಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಆದರೆ  ಪ್ರಸ್ತುತ ವಿಮಾನಸಂಸ್ಥೆಯ  ಸಿಇಒ ಮಿರ್ವೈಸ್ ಮಿರ್ಜಕ್ವಾಲ್ ಇದನ್ನು ನಿರಾಕರಿಸಿದ್ದಾರೆ.

ವಿಮಾನ ಪತನಗೊಂಡಿರುವುದು ನಿಜ. ಆದರೆ ಅರಿಯಾನ ಸಂಸ್ಥೆಯ ವಿಮಾನವಲ್ಲ. ನಮ್ಮ ಸಂಸ್ಥೆಯಿಂದ ಹೆರಾತ್‌ನಿಂದ ಕಾಬೂಲ್ ಮತ್ತು ಹೆರಾತ್‌ನಿಂದ ದೆಹಲಿಗೆ ಎರಡು ವಿಮಾನಗಳು ಹಾರಾಟ ನಡೆಸಿದ್ದು ಇವೆರಡೂ ಸುರಕ್ಷಿತವಾಗಿವೆ ಎಂದು ಮಿರ್ಜಕ್ವಾಲ್ ಹೇಳಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಘಜ್ನಿ ಬಳಿ ವಿಮಾನ ಪತನವಾಗಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ವಿಮಾನ ಪತನಕ್ಕೆ ಕಾರಣ ಏನು ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಸಾವು ನೋವುಗಳ ಬಗ್ಗೆಯೂ ವರದಿ ಆಗಿಲ್ಲ ಎಂದು ಬಿಬಿಸಿ ವರದಿ  ಮಾಡಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು