ಮಂಗಳವಾರ, ಜನವರಿ 28, 2020
20 °C

ಇರಾಕ್ ಅರೆಸೇನಾಪಡೆ ಮೇಲೆ ಅಮೆರಿಕ ಮತ್ತೆ ವಾಯುದಾಳಿ: ಭಾರಿ ಸಾವುನೋವು ಶಂಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬಾಗ್ದಾದ್: ಇರಾಕ್‌ನ ಹಶೆದ್ ಅಲ್ ಶಾಬಿ ಅರೆಸೇನಾಪಡೆಯ ವಾಹನಗಳ ಮೇಲೆ ಅಮೆರಿಕ ಶನಿವಾರ ನಸುಕಿನಲ್ಲಿ ವಾಯುದಾಳಿ ನಡೆಸಿದೆ ಎಂದು ಸರ್ಕಾರಿ ವಾಹಿನಿ ವರದಿ ಮಾಡಿದೆ. ಇರಾನ್‌ನ ಉನ್ನತ ಸೇನಾಧಿಕಾರಿಯನ್ನು ಕೊಂದ ಒಂದು ದಿನದ ನಂತರ ಅಮೆರಿಕ ಮತ್ತೆ ಇರಾಕ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಿದೆ.

ಬಾಗ್ದಾದ್‌ನ ಉತ್ತರ ಭಾಗದಲ್ಲಿ ನಡೆದ ದಾಳಿಗೆ ಹಶೆದ್ ಅಲ್ ಶಾಬಿ ಅರೆಸೇನಾಪಡೆಯ ವಾಹನಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಆದರೆ ಯಾರನ್ನು ಕೊಲ್ಲುವ ಉದ್ದೇಶದಿಂದ ಈ ದಾಳಿ ನಡೆದಿದೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ.

‘ರಸ್ತೆಯ ಮೇಲಿದ್ದ ವಾಹನ ಸಾಲುಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಭಾರಿ ಪ್ರಮಾಣದಲ್ಲಿ ಸಾವುನೋವು ಸಂಭವಿಸಿದೆ’ ಎಂದು ಸ್ಥಳೀಯ ಪೊಲೀಸ್‌ ಮೂಲಗಳನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ. ಆದರೆ ಸತ್ತವರ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ.

ಇದನ್ನೂ ಓದಿ: ಇರಾನ್‌–ಅಮೆರಿಕ ಸಂಘರ್ಷ ತೀವ್ರ: ಭಾರತದ ಬಜೆಟ್‌ಗೆ ಬರೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು