ಶನಿವಾರ, ಮೇ 30, 2020
27 °C

ಐಸಿಯುಗೆ ಬ್ರಿಟನ್ ಪ್ರಧಾನಿ ಸ್ಥಳಾಂತರ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

prajavani

ಲಂಡನ್‌: ಕೋವಿಡ್‌ ಸೋಂಕಿಗೆ ತುತ್ತಾಗಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ.

55 ವರ್ಷದ ಜಾನ್ಸನ್‌ ಅವರನ್ನು ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 10 ದಿನಗಳಿಂದ ಅವರು ತೀವ್ರ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದಾರೆ. 

‘ಪ್ರಧಾನಿ ಅವರಿಗೆ ಆಮ್ಲಜನಕ ನೆರವು ನೀಡಿದ್ದು, ನಿಗಾ ಘಟಕದಲ್ಲಿ ಇಡಲಾಗಿದೆ’ ಎಂದು ಸಂಪುಟ ಕಚೇರಿ ಸಚಿವ ಮೈಕೆಲ್‌ ಗೋವ್‌ ಅವರು ಸ್ಥಳೀಯ ರೇಡಿಯೊಗೆ ತಿಳಿಸಿದ್ದಾರೆ. 

ಜಪಾನ್‌ನಲ್ಲಿ ತುರ್ತುಸ್ಥಿತಿ ಜಾರಿ

ಟೋಕಿಯೊ (ಎಎಫ್‌ಪಿ): ಕೋವಿಡ್‌ನಿಂದಾಗಿ ಟೊಕಿಯೊ ಸೇರಿದಂತೆ ದೇಶದ ಪ್ರಮುಖ ಪ್ರದೇಶಗಳಿಗೆ ಅನ್ವಯಿಸಿ ಪ್ರಧಾನಿ ಶಿಂಜೊ ಅಬೆ ತುರ್ತುಸ್ಥಿತಿ ಘೋಷಿಸಿ ದ್ದಾರೆ. ಮಂಗಳವಾರ ಮಧ್ಯರಾತ್ರಿಯಿಂದ ಇದು ಜಾರಿಗೆ ಬರಲಿದ್ದು, ಒಂದು ತಿಂಗಳವರೆಗೆ ಜಾರಿಯಲ್ಲಿರುವ ಎಂದು ಎನ್ನಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು