ಮಂಗಳವಾರ, ಜನವರಿ 21, 2020
29 °C

ಚೀನಾ ಜತೆ ಅಮೆರಿಕ ಮಹತ್ವದ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ :ಚೀನಾ ಜತೆಗಿನ ಮೊದಲ ಹಂತದ ವ್ಯಾಪಾರ ಒಪ್ಪಂದಕ್ಕೆ ಅಮೆರಿಕ ಬುಧವಾರ ಸಹಿ ಹಾಕಿದೆ.

ಜಗತ್ತಿನ ಎರಡು ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ನಡುವೆ ನಡೆದ ಮಹತ್ವದ ಒಪ್ಪಂದ ಇದಾಗಿದೆ. ಈ ಒಪ್ಪಂದದಲ್ಲಿ ಅಮೆರಿಕದ ಹಣಕಾಸು ಸೇವೆಗಳಿಗೆ ಇದ್ದ ನಿರ್ಬಂಧವನ್ನು ತೆಗೆದುಹಾಕುವುದು, ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ಸೇರಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಚೀನಾ ಉಪಪ್ರಧಾನಿ ಲಿಯು ಹಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

’ಇದೊಂದು ಐತಿಹಾಸಿಕ ಒಪ್ಪಂದ. ಇದೊಂದು ಮಹತ್ವದ ಹೆಜ್ಜೆ. ಈ ಒಪ್ಪಂದಕ್ಕೆ ಚೀನಾ ಅಧ್ಯಕ್ಷರನ್ನು ಅಭಿನಂದಿಸುತ್ತೇನೆ. ಶೀಘ್ರದಲ್ಲೇ ನಾನು ಚೀನಾಗೂ ಭೇಟಿ ನೀಡುತ್ತೇನೆ. ‘ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಣ್ಣಿಸಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು