ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ವುಹಾನ್ ನಗರದಲ್ಲಿ 76 ದಿನಗಳ ನಂತರ ಲಾಕ್ ಡೌನ್ ತೆರವು, ರಸ್ತೆಗಿಳಿದ ಜನ

Last Updated 8 ಏಪ್ರಿಲ್ 2020, 4:56 IST
ಅಕ್ಷರ ಗಾತ್ರ

ವುಹಾನ್ (ಚೀನಾ): ವಿಶ್ವದಲ್ಲಿಯೇ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ವುಹಾನ್ ನಗರದಲ್ಲಿ ಬುಧವಾರದಿಂದ ಲಾಕ್‌‌ಡೌನ್ ತೆರವುಗೊಳಿಸಲಾಗಿದ್ದು, 76 ದಿನಗಳಿಂದ ಮನೆಯೊಳಗೆ ಬಂಧಿಗಳಾಗಿದ್ದ ಜನರು ಈಗ ರಸ್ತೆಗೆ ಇಳಿದಿದ್ದಾರೆ.

ಇದರಿಂದಾಗಿ ಕೊರೊನಾ ಸೋಂಕು ತಡೆಗಟ್ಟಲು ಲಾಕ್‌‌ಡೌನ್ ಪರಿಣಾಮಕಾರಿ ಮಾರ್ಗ ಎಂಬುದನ್ನು ಅರಿತ ಚೀನಾ ಅನುಸರಿಸಲು ಅತ್ಯಂತ ಕಠಿಣವಾದರೂ 76 ದಿನಗಳ ಕಾಲ ಲಾಕ್‌‌ಡೌನ್ ಜಾರಿಗೊಳಿಸಿ ಕೊರೊನಾ ಸೋಂಕುತಡೆಗಟ್ಟುವಲ್ಲಿ ಯಶಸ್ವಿಯಾಗಿದೆ.
ವುಹಾನ್ ನಗರದಲ್ಲಿ ಈಗ ಸ್ಥಳೀಯ ಸಾರಿಗೆಗೆ ಅವಕಾಶ ಕಲ್ಪಿಸಲಾಗಿದೆ. ಅಂಗಡಿ ಮುಂಗಟ್ಟುಗಳಿಗೆ, ಸಣ್ಣಪುಟ್ಟ ವ್ಯಾಪಾರದಿಂದ ಆರಂಭವಾಗಿ ಬೃಹತ್ ಪ್ರಮಾಣದ ವ್ಯಾಪಾರಗಳಿಗೆ ಅವಕಾಶ ನೀಡಲಾಗಿದೆ.

ಜನವರಿಯಿಂದ ಆರಂಭವಾಗಿದ್ದ ಲಾಕ್‌‌ಡೌನ್ನಿಂದಾಗಿ ವುಹಾನ್ ನಗರದಲ್ಲಿ ಜನ ಮನೆಯೊಳಗೆ ಬಂಧಿಗಳಾಗಿದ್ದರು.
ಲಾಕ್‌‌ಡೌನ್ ತೆರವುಗೊಳಿಸಿದ್ದರೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿರುವ ಚೀನಾ ಸರ್ಕಾರ ಪ್ರತಿಯೊಬ್ಬರೂ ಆರೋಗ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವಂತೆ ಆದೇಶ ಹೊರಡಿಸಿದೆ. ಚೀನಾ ಹುಬೇ ನಗರದಲ್ಲಿ ಮಾರ್ಚ್25ರಂದು ಲಾಕ್‌‌ಡೌನ್ ತೆರವುಗೊಳಿಸಲಾಗಿತ್ತು. ಆದರೆ, ಅತ್ಯಂತ ಹೆಚ್ಚುಸಾವು ಕಂಡು ಬಂದ ವುಹಾನ್ ನಗರದಲ್ಲಿ ಲಾಕ್‌‌ಡೌನ್ ಮುಂದುವರಿಸಲಾಗಿತ್ತು.
ಚೀನಾ ಸರ್ಕಾರ ಪ್ರತಿಯೊಬ್ಬರಿಗೂ ಕ್ಯುಆರ್ ಕೋಡ್ ನೀಡಿದೆ. ಇದು ಅವರ ಆರೋಗ್ಯದ ಸ್ಥಿತಿಯನ್ನು ತಿಳಿಸಲಿದೆ. ಹಸಿರು ಬಣ್ಣದ ಕ್ಯುಆರ್ ಕೋಡ್ ನೀಡಿರುವ ವ್ಯಕ್ತಿಗಳು ಉತ್ತಮ ಆರೋಗ್ಯ ಹೊಂದಿದವರಾಗಿದ್ದು, ಕೆಲವುನಿಯಮಗಳನ್ನು ಪಾಲಿಸಿ ಹೊರಗೆ ತಿರುಗಾಡಬಹುದು. ಇತರೆ ನಗರಗಳಿಗೆ ತೆರಳಬಹುದು.

ಇದೇ ಆಧಾರದಲ್ಲಿ 55 ಸಾವಿರ ಮಂದಿ ಹಸಿರು ಕ್ಯುಆರ್ ಕೋಡ್ ಹೊಂದಿದ್ದು ರೈಲಿನ ಮೂಲಕ ವುಹಾನ್ ನಗರದಿಂದ ಚೀನಾದ ಇತರ ಕಡೆಗಳಿಗೆ ಪ್ರಯಾಣಿಸಿದ್ದಾರೆ ಎಂದು ಸ್ಥಳೀಯ ರೈಲ್ವೆ ಇಲಾಖೆಯ ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT