ಭಾನುವಾರ, ಏಪ್ರಿಲ್ 5, 2020
19 °C

ಚೀನಾ: ಹ್ಯುಬೆಯಲ್ಲಿ ನಿರ್ಬಂಧ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್/ವುಹಾನ್ (ಪಿಟಿಐ): ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿರುವ ಚೀನಾದ ಹ್ಯುಬೆ ಪ್ರಾಂತ್ಯದಲ್ಲಿ 5.60 ಕೋಟಿಗೂ ಹೆಚ್ಚು ಜನರ ಮೇಲೆ ಮೂರು ತಿಂಗಳಿಂದ ವಿಧಿಸಲಾಗಿದ್ದ ಲಾಕ್ ಡೌನ್ ಅನ್ನು ಬುಧವಾರ ತೆರವುಗೊಳಿಸಲು ಸರ್ಕಾರ ನಿರ್ಧರಿಸಿದೆ.

ಕೋವಿಡ್-19 ಜಾಗತಿಕ ಪಿಡುಗಾಗಿ ಪರಿಣಮಿಸಿದ್ದು, ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಜಗತ್ತಿನ ಹಲವೆಡೆ ಲಾಕ್ ಡೌನ್ ಮಾಡುವ ಸ್ಥಿತಿ ಎದುರಾಗಿರುವ ಹೊತ್ತಿನಲ್ಲಿಯೇ, ಕೊರೊನಾ ವೈರಸ್ ಸೋಂಕಿನ ಕೇಂದ್ರ ಸ್ಥಾನಗಳಲ್ಲಿ ಲಾಕ್ ಡೌನ್ ತೆರವುಗೊಳಿಸುವ ಮಹತ್ವದ ನಿರ್ಣಯವನ್ನು ಚೀನಾ ಕೈಗೊಂಡಿದೆ.

ಹ್ಯುಬೆ ರಾಜಧಾನಿ ವುಹಾನ್‌ನಲ್ಲಿ ಏಪ್ರಿಲ್ 8ರಂದು ಲಾಕ್ ಡೌನ್ ಕೊನೆಯಾಗಲಿದೆ.

ಜ.23ರಿಂದ ಇಡೀ ಪ್ರಾಂತ್ಯದಲ್ಲಿ ಎಲ್ಲರನ್ನೂ ಕಟ್ಟುನಿಟ್ಟಾಗಿ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿತ್ತು. ಜನಸಂಚಾರ ಹಾಗೂ ವಾಹನ ಸಂಚಾರಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು. 1.10 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ವುಹಾನ್‌ನಲ್ಲಿ ಸತತ ಐದು ದಿನಗಳ ಕಾಲ ಯಾವುದೇ ಸೋಂಕು ಪ್ರಕರಣ ಇರಲಿಲ್ಲ. ಸೋಮವಾರ ಹೊಸದಾಗಿ ಸೋಂಕು ದೃಢಪಟ್ಟ ಒಂದು ಪ್ರಕರಣ ವರದಿಯಾಗಿದೆ.  

ಕಳೆದ ಡಿಸೆಂಬರ್ ಅಂತ್ಯದಲ್ಲಿ ಮೊದಲ ವೈರಸ್ ಸೋಂಕು ಪ್ರಕರಣ ಇಲ್ಲಿ ವರದಿಯಾಗಿತ್ತು.

‘ವುಹಾನ್‌ನಲ್ಲಿ ಕೋವಿಡ್-19 ಪಿಡುಗಿಗೆ ಗುರಿಯಾದವರ ಅಥವಾ ಕೊರೊನಾ ಸೋಂಕು ಶಂಕಿತರ ಜತೆ ಯಾವುದೇ ಸಂಪರ್ಕ ಹೊಂದಿಲ್ಲದೆ ಇರುವವರಿಗೆ ಹಸಿರು ಆರೋಗ್ಯ ಕಾರ್ಡ್ ನೀಡಲಾಗುತ್ತದೆ. ಅಂತಹವರಿಗೆ ವುಹಾನ್ ನಗರ ಹಾಗೂ ಹ್ಯುಬೆ ಪ್ರಾಂತ್ಯ ದಿಂದ ಹೊರಗೆ ಸಂಚರಿಸಲು ಅವಕಾಶ ನೀಡಲಾಗುತ್ತದೆ’ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು