ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಚೀನಾದಿಂದ ವಿದ್ಯುತ್‌ ಯೋಜನೆ

1,124 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಯೋಜನೆ
Last Updated 2 ಜೂನ್ 2020, 11:24 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 1,124 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಯೋಜನೆಯನ್ನು ‘ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌’ (ಸಿಪಿಇಸಿ) ಅಡಿಯಲ್ಲಿ ಕೈಗೊಳ್ಳಲು ಚೀನಾ ಉದ್ದೇಶಿಸಿದೆ. ಭಾರತದ ಆಕ್ಷೇಪದ ನಡುವೆಯೂ ಚೀನಾ ಈ ಯೋಜನೆಯನ್ನು ಕೈಗೊಂಡಿದೆ.

ಪಾಕಿಸ್ತಾನದ ಇಂಧನ ಸಚಿವ ಒಮರ್‌ ಅಯೂಬ್‌ ಅಧ್ಯಕ್ಷತೆಯಲ್ಲಿ ನಡೆದ ಖಾಸಗಿ ವಿದ್ಯುತ್‌ ಮತ್ತು ಮೂಲಸೌಕರ್ಯಗಳ ಮಂಡಳಿಯ (ಪಿಪಿಐಬಿ) 127ನೇ ಸಭೆಯಲ್ಲಿ ಕೊಹಲ ಜಲ ವಿದ್ಯುತ್‌ ಯೋಜನೆ ವಿವರಗಳನ್ನು ಮಂಡಿಸಲಾಯಿತು.

ಚೀನಾದ ತ್ರೀ ಗಾರ್ಗೆಸ್‌ ಕಾರ್ಪೋರೇಷನ್‌, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಿಪಿಐಬಿ ಅಧಿಕಾರಿಗಳ ನಡುವೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ವಿವರಿಸಲಾಯಿತು ಎಂದು ‘ದ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

ಝೆಲಂ ನದಿ ನೀರು ಬಳಸಿಕೊಂಡು ಈ ಯೋಜನೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಕಡಿಮೆ ವೆಚ್ಚದದಲ್ಲಿ ವಾರ್ಷಿಕ 500 ಕೋಟಿ ಯೂನಿಟ್‌ ವಿದ್ಯುತ್‌ ಅನ್ನು ಪಾಕಿಸ್ತಾನದ ಗ್ರಾಹಕರಿಗೆ ಒದಗಿಸಲು ಯೋಜನೆ ರೂಪಿಸಲಾಗಿದೆ.

₹18.03 ಸಾವಿರ ಕೋಟಿ (2.4 ಶತಕೋಟಿ ಡಾಲರ್‌) ಹೂಡಿಕೆ ಮಾಡಿ ಈ ಯೋಜನೆ ಕೈಗೊಳ್ಳಲಾಗುತ್ತಿದೆ. ಈ ಪ್ರದೇಶದಲ್ಲಿ ಖಾಸಗಿ ವಿದ್ಯುತ್‌ ಉತ್ಪಾದನೆ ಕಂಪನಿಯೊಂದು ಹೂಡಿಕೆ ಮಾಡಿರುವ ಬೃಹತ್‌ ಪ್ರಮಾಣದ ಮೊತ್ತ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT