ಶನಿವಾರ, ಜುಲೈ 31, 2021
21 °C

ಆಕ್ಷೇಪಾರ್ಹ ಬರಹ: ಭಾರತೀಯ ವಿದ್ಯಾರ್ಥಿ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ ಚೀನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ಚೀನಾ ಜನರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್‌ ಮಾಡಿದ್ದ ಎನ್ನಲಾದ ಭಾರತದ ವಿದ್ಯಾರ್ಥಿ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಚೀನಾದ ಜಿಯಾಂಗ್ಷು ವಿಶ್ವವಿದ್ಯಾಲಯ ಎಚ್ಚರಿಕೆ ನೀಡಿದೆ. 

ಕಡುಕ್ಕಸೇರಿ ಎಂಬ ಅಡ್ಡಹೆಸರಿನ ಭಾರತದ ವಿದ್ಯಾರ್ಥಿ ಪ್ರಕಟಿಸಿದ ಬರಹವು ಟ್ವಿಟರ್‌‌ ಹೋಲುವ ಚೀನಾದ ಸೈನಾ ವೀಬೊ ಎಂಬ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

‘ತನಿಖೆ ನಡೆಸಿದ ಬಳಿಕ ವಿದೇಶಿ ವಿದ್ಯಾರ್ಥಿಗಳ ನಿಯಮಾವಳಿಗಳ ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ವಿಶ್ವವಿದ್ಯಾಲಯದ ಅಧಿಕಾರಿ ವು ಅವರು ಎಚ್ಚರಿಸಿದ್ದಾರೆ. ತನ್ನ ಬರಹದ ಬಗ್ಗೆ ವಿದ್ಯಾರ್ಥಿ ಕ್ಷಮೆ ಕೇಳಿದ್ದಾನೆ ಎಂದೂ ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.