ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಕ್‌ಕಾಂಗ್‌: ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ ಪೊಲೀಸರು

Last Updated 26 ಆಗಸ್ಟ್ 2019, 17:53 IST
ಅಕ್ಷರ ಗಾತ್ರ

ಹಾಂಕ್‌ಕಾಂಗ್‌: ರ್‍ಯಾಲಿ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ದಾಳಿ ಮಾಡಿದ ಪ್ರತಿಭಟನಕಾರರ ಮೇಲೆ ಭಾನುವಾರ ರಾತ್ರಿ ಹಾಂಗ್‌ಕಾಂಗ್‌ ಪೊಲೀಸರು ಗುಂಡು ಹಾರಿಸಿದ್ದಾರೆ.

ನಗರವಾಸಿಗಳು ಮತ್ತು ಸ್ಥಳೀಯಾಡಳಿತಕ್ಕೆ ನಡುಕ ಹುಟ್ಟಿಸುವ ರೀತಿಯಲ್ಲಿ ಪ್ರತಿಭಟನೆಯ ತೀವ್ರತೆ ಹೆಚ್ಚಿದ್ದರಿಂದ ಮೊದಲ ಬಾರಿಗೆ ವಾಟರ್‌ ಕ್ಯಾನನ್‌ ಟ್ರಕ್‌ಗಳನ್ನು ಬಳಸಿ ಪೊಲೀಸರು ಪ್ರತಿಭಟನೆಯನ್ನು ನಿಯಂತ್ರಿಸಲು ಯತ್ನಿಸಿದರು.

ಸ್ಯುಯೆನ್‌ ವಾನ್‌ ಜಿಲ್ಲೆಯಲ್ಲಿ ನಡೆದ ರ್‍ಯಾಲಿಯು ಹತ್ತಿರದ ಉದ್ಯಾನದಲ್ಲಿ ಮುಕ್ತಾಯಗೊಂಡಿತು. ಬೃಹತ್‌ ಸಂಖ್ಯೆಯ ಪ್ರತಿಭಟನಕಾರರು ಪಾರ್ಕ್‌ನಲ್ಲಿ ‌ನಡೆದ ರ‍್ಯಾಲಿಯಲ್ಲಿ ಭಾಗವಹಿಸಿದರೆ, ಕೆಲವು ತೀವ್ರವಾದಿ ಪ್ರತಿಭಟನಕಾರರು ಮುಖ್ಯರಸ್ತೆಯಲ್ಲಿ ಬಿದಿರು ಕೋಲುಗಳು, ಕಿತ್ತಳೆ ಮತ್ತು ಬಿಳಿ ಬಣ್ಣದ ಸಂಚಾರಿ ಗೇಟುಗಳು ಮತ್ತು ಕೋನ್‌ಗಳನ್ನು ಬಳಸಿ ಸಂಚಾರಿ ಪೊಲೀಸರಿಗೆ ತೊಂದರೆ ಉಂಟು ಮಾಡಿದರು.

ಪ್ರತಿಭಟನೆ ಎಲ್ಲೆ ಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಮೊದಲು ಎಚ್ಚರಿಕೆಯ ಫಲಕಗಳನ್ನು ತೋರಿಸಿ ಬಳಿಕ ಅಶ್ರುವಾಯು ಪ್ರಯೋಗಿಸಿ ಗುಂಪು ಚದುರಿಸಲು ಯತ್ನಿಸಿದರು. ಆದರೆ ಪ್ರತಿಭಟನಾಕಾರರು ಇಟ್ಟಿಗೆಗಳನ್ನು ಮತ್ತು ಗ್ಯಾಸೋಲಿನ್‌ ಬಾಂಬ್‌ಗಳನ್ನು ಪೊಲೀಸರತ್ತ ಎಸೆಯಲಾರಂಭಿಸಿದರು. ಪೊಲೀಸರು ಪ್ರತಿಯಾಗಿ ಅಶ್ರುವಾಯು, ಲೇಸರ್‌ ಲೈಟ್‌ಗಳನ್ನು ಪ್ರಯೋಗಿಸಿದರು.

ಕೆಲವು ಗುಂಪುಗಳು ಪೊಲೀಸರತ್ತ ಕೋಲು ಮತ್ತು ಸಲಾಕೆಗಳನ್ನು ಎಸೆದಾಗ ಪೊಲೀಸರು ಗುಂಡು ಹಾರಿಸಿದರು. 12 ವರ್ಷದ ಬಾಲಕ ಸೇರಿದಂತೆ ಒಟ್ಟು 36 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT