ಶನಿವಾರ, ಮಾರ್ಚ್ 28, 2020
19 °C

ಚೀನಾದಲ್ಲಿ ಕೊರೊನಾ ಅಟ್ಟಹಾಸ: 3070ಕ್ಕೆ ಏರಿದ ಸಾವಿನ ಸಂಖ್ಯೆ

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಕೊರಾನಾ ವೈರಸ್‌ ಸೋಂಕಿಗೆ ಚೀನಾದಲ್ಲಿ ಶುಕ್ರವಾರ 28 ಜನರು ಹೊಸದಾಗಿ ಬಲಿಯಾಗಿದ್ದು, ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 3,070ಕ್ಕೆ ತಲುಪಿದೆ.

ಶುಕ್ರವಾರ ಹೊಸದಾಗಿ 99 ಜನರಿಗೆ ಕೋವಿಡ್–19 ತಗುಲಿರುವ ವರದಿಯಾಗಿದೆ. ಹುಬೈ ಪ್ರಾಂತ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಇಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ‌

ಈ ಪ್ರಾಂತ್ಯದಲ್ಲಿ 74 ಜನರಿಗೆ ಹೊ‌ಸದಾಗಿ ಕೋವಿಡ್–19 ತಗುಲಿದ್ದಾಗಿ ತಿಳಿದುಬಂದಿದೆ. ಇದು 2 ತಿಂಗಳ ಅವಧಿಯಲ್ಲಿ ದಾಖಲಾದ ಅತಿ ಕಡಿಮೆ ಸಂಖ್ಯೆಯಾಗಿದೆ.

ಇತರ ದೇಶಗಳಿಂದ ಬಂದಿರುವ 24 ಜನರಲ್ಲಿ ಕೋವಿಡ್‌–19 ತಗುಲಿದ್ದು, ವಿದೇಶಗಳಲ್ಲಿ ಕೊರೊನಾ ಸೋಂಕು ಹರಡುವ ಪ್ರಮಾಣ ಹೆಚ್ಚಾಗಲಿದೆ ಎಂದು ಆರೋಗ್ಯಧಿಕಾರಿಗಳು ತಿಳಿಸಿದ್ದಾರೆ. 

ವಿಶ್ವದಾದ್ಯಂತ 1 ಲಕ್ಷಕ್ಕೂ ಅಧಿಕ ಜನರು ಕೋವಿಡ್‌–19ನಿಂದ ಬಳಲುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು