ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಅಮೆರಿಕದಿಂದ ಪ್ಯಾಕೇಜ್

Last Updated 27 ಮಾರ್ಚ್ 2020, 1:18 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಎಎಫ್‌ಪಿ, ಪಿಟಿಐ): ಕೊರೊನಾ ವೈರಸ್‌ನಿಂದ ಉಂಟಾದ ಸದ್ಯದ ಸಂಕಷ್ಟದ ಪರಿಸ್ಥಿತಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ₹150 ಲಕ್ಷ ಕೋಟಿ ಮೊತ್ತದಪ್ಯಾಕೇಜ್‌ಗೆ ಅಮೆರಿಕ ಸೆನೆಟ್‌ ಅನುಮೋದನೆ ನೀಡಿದೆ.

ಆರ್ಥಿಕತೆಗೆ ಪುನಶ್ಚೇತನ ನೀಡುವುದು ಮತ್ತು ಅಮೆರಿಕದ ನಾಗರಿಕರಿಗೆ ಪರಿಹಾರ ಒದಗಿಸಲು ಹಾಗೂ ಆಸ್ಪತ್ರೆಗಳಿಗೆ ಅತ್ಯುತ್ತಮ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಪ್ರಸ್ತಾವ ಸಿದ್ಧಪಡಿಸಲಾಗಿದೆ.

ಅಮೆರಿಕದ ತೆರಿಗೆ ಪಾವತಿದಾರರಿಗೆ ನಗದು ಪಾವತಿ, ಸಣ್ಣ ವ್ಯಾಪಾರಿಗಳಿಗೆ ಮತ್ತು ಪ್ರಮುಖ ಉದ್ಯಮಿಗಳಿಗೆ ಸಾಲ ಮತ್ತು ಅನುದಾನ ನೀಡುವುದು ಈಪ್ಯಾಕೇಜ್‌ ಒಳಗೊಂಡಿದೆ. ಬಹುಮತದಿಂದ ಈಪ್ಯಾಕೇಜ್‌ ಪ್ರಸ್ತಾವನೆಗೆ ಸೆನೆಟ್‌ ಬಹುಮತದಿಂದ ಅನುಮೋದನೆ ನೀಡಿತು. ಇನ್ನು ಜನಪ್ರತಿನಿಧಿಗಳ ಸಭೆ ಈ ಪ್ರಸ್ತಾವನೆಗೆ ಅನುಮೋದನೆ ನೀಡಬೇಕಾಗಿದೆ. ಬಳಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಲಿದ್ದಾರೆ.

ಹಲವು ರಾಜ್ಯಗಳಲ್ಲಿ ವಿಪತ್ತು: ಕೊರೊನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಮೆರಿಕದ ಕೆಲವು ರಾಜ್ಯಗಳಲ್ಲಿ ಇದೊಂದು ಪ್ರಮುಖ ವಿಪತ್ತು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.ಚೀನಾ ಮತ್ತು ಇಟಲಿ ಹೊರತುಪಡಿಸಿದರೆ ಅಮೆರಿಕದಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ನ್ಯೂಯಾರ್ಕ್‌, ಕ್ಯಾಲಿ
ಫೋರ್ನಿಯಾ, ವಾಷಿಂಗ್ಟನ್‌, ಲೋವಾ, ಲೂಯಿಸಿಯಾನಾ, ನಾರ್ಥ್‌ ಕ್ಯಾರೊಲಿನಾ, ಟೆಕ್ಸಾಸ್‌ ಮತ್ತು ಫ್ಲಾರಿಡಾ ವ್ಯಾಪ್ತಿಯಲ್ಲಿ ಈ ಘೋಷಣೆ ಅನ್ವಯವಾಗಲಿದೆ.

ಅಮೆರಿದಲ್ಲಿ ಈಗಾಗಲೇ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದರ ಜತೆಗೆ, ಈ ಕ್ರಮಕೈಗೊಳ್ಳಲಾಗಿದೆ. ಅತಿ ಹೆಚ್ಚು ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ನ್ಯೂಯಾರ್ಕ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ನ್ಯೂಯಾರ್ಕ್‌ನಲ್ಲಿ ಮಂಗಳವಾದವರೆಗೆ 30ಸಾವಿರ ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು ಮತ್ತು 285 ಮಂದಿ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT