ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ, ಇಟಲಿಗಿಂತ ಭಾರತದ ವೈರಸ್‌ ಅಪಾಯಕಾರಿ: ನೇಪಾಳ ಪ್ರಧಾನಿ ಕೆ.ಪಿ. ಓಲಿ

Last Updated 20 ಮೇ 2020, 20:00 IST
ಅಕ್ಷರ ಗಾತ್ರ

ನೇಪಾಳ : ‘ಚೀನಾ ಮತ್ತು ಇಟಲಿಗಿಂತಲೂ ಭಾರತದಿಂದ ಬಂದಿರುವ ವೈರಸ್‌ ಹೆಚ್ಚು ಅಪಾಯಕಾರಿ’ ಎಂದು ನೇಪಾಳ ಪ್ರಧಾನಿಕೆ.ಪಿ. ಓಲಿ ಕಿಡಿಕಾರಿದ್ದಾರೆ.

ಸಂಸತ್ತಿನಲ್ಲಿ ಭಾರತದ ವಿರುದ್ಧ ಟೀಕೆಗಳ ಸುರಿಮಳೆ ಗೈದಿರುವ ಅವರು,‘ನೇಪಾಳದಲ್ಲಿ ಕೊರೊನಾ ವೈರಸ್‌ ಹರಡಲು ಭಾರತವೇ ಕಾರಣ’ ಎಂದು ದೂಷಿಸಿದ್ದಾರೆ.

‘ಹೊರಗಿನಿಂದ ಬರುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸೋಂಕು ನಿಯಂತ್ರಿಸುವುದು ಕಷ್ಟಸಾಧ್ಯವಾಗಿದೆ. ದೇಶದೊಳಗೆ ಅತಿಕ್ರಮವಾಗಿ ಪ್ರವೇಶಿಸಿದ ಭಾರತೀಯರಿಂದಲೇ ಸೋಂಕು ವ್ಯಾಪಿಸಿದೆ. ಸೂಕ್ತ ತಪಾಸಣೆ ನಡೆಸದೆ ಭಾರತದಿಂದ ಜನರನ್ನು ಕರೆತರುವ ಕೆಲವು ಸ್ಥಳೀಯ ಪ್ರತಿನಿಧಿಗಳು ಮತ್ತು ಪಕ್ಷದ ಮುಖಂಡರು ಇದಕ್ಕೆ ಹೊಣೆಗಾರರು. ಗಡಿಯ ಹೊರಗಿನ ಜನರ ಒಳನುಸುಳುವಿಕೆಯನ್ನು ತಡೆಯಲು ನಮಗೆ ಸಾಧ್ಯವಾಗಲಿಲ್ಲ’ ಎಂದು ತಿಳಿಸಿದ್ದಾರೆ.

‘ಭಾರತದ ನಕ್ಷೆಯೊಳಗೆ ಸೇರಿಕೊಂಡಿರುವ ‘ಕಾಲಾಪಾನಿ’ ಮತ್ತು ‘ಲಿಪುಲೇಕ್‌’ ಪ್ರದೇಶಗಳನ್ನು ಮರಳಿ ಪಡೆದೇ ತೀರುತ್ತೇವೆ’ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.ನೇಪಾಳದಲ್ಲಿ ಈವರೆಗೆ 427 ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT