ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡುವಿಕೆ ಮುಂದುವರಿದಿದ್ದು ಸಾವಿನ ಸಂಖ್ಯೆ ಒಂದು ಲಕ್ಷದ ಸನಿಹ ತಲುಪಿದೆ.

ಇಂದಿನವರೆಗೆ (ಶುಕ್ರವಾರ) ಜಗತ್ತಿನಾದ್ಯಂತ 16,01,018 ಜನರಿಗೆ ಸೋಂಕು ದೃಢಪಟ್ಟಿದೆ. 95,718 ಜನ ಮೃತಪಟ್ಟಿದ್ದು, 3,54,972 ಜನ ಗುಣಮುಖರಾಗಿದ್ದಾರೆ.

ಸೋಂಕು ಪತ್ತೆಯಾಗಿ 100 ದಿನ: ಮೊತ್ತಮೊದಲ ಬಾರಿ ಕೋವಿಡ್–19 ಪತ್ತೆಯಾಗಿ ಇಂದಿಗೆ 100 ದಿನಗಳು ಪೂರ್ಣಗೊಂಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ತಿಳಿಸಿದೆ. ಈವರೆಗೆ 13 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೋವಿಡ್ ದೃಢಪಟ್ಟಿದೆ ಎಂದಿರುವ ಡಬ್ಲ್ಯುಎಚ್ಒ, 80 ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ ಎಂದಿದೆ.

‘ಕೋವಿಡ್ನಿಂದ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಸದಾ ಸಹಾಯಕ್ಕೆ ಡಬ್ಲ್ಯುಎಚ್ಒ ಬದ್ಧವಾಗಿದೆ. ನಿಖರ ಮಾಹಿತಿ ನೀಡಲು, ಕೋವಿಡ್ ವಿರುದ್ಧದ ಹೋರಾಟದಲ್ಲಿ ದೇಶಗಳಿಗೆ ನೆರವು ನೀಡಲು, ವೈದ್ಯಕೀಯ ಉಪಕರಣಗಳು ಮತ್ತು ಔಷಧ ಪೂರೈಸಲು ಸದಾ ಸಿದ್ಧವಿದೆ. ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡುವಿಕೆ ಹಾಗೂ ಅವರನ್ನು ಸಜ್ಜುಗೊಳಿಸಲೂ ನೆರವು ನೀಡಲಿದೆ’ ಎಂದು ಫೇಸ್ಬುಕ್ನಲ್ಲಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಡಬ್ಲ್ಯುಎಚ್ಒ ತಿಳಿಸಿದೆ. ಜತೆಗೆ, ಮೊತ್ತಮೊದಲ ಬಾರಿ ಕೋವಿಡ್–19 ಪತ್ತೆಯಾಗಿ 100 ದಿನಗಳಾಗಿರುವ ಹಿನ್ನೆಲೆಯಲ್ಲಿ ವಿಡಿಯೊವೊಂದನ್ನೂ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.