ಶನಿವಾರ, ಜೂನ್ 6, 2020
27 °C

Covid-19 World Update: ವಿಶ್ವದಾದ್ಯಂತ 2.50 ಲಕ್ಷ ಸಮೀಪಿಸಿದ ಸಾವಿನ ಸಂಖ್ಯೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Coronavirus

ವಾಷಿಂಗ್ಟನ್: ಕೊರೊನಾ ವೈರಸ್‌ ಸೋಂಕಿನಿಂದಾಗಿ ವಿಶ್ವದಾದ್ಯಂತ ಮೃತಪಟ್ಟವರ ಸಂಖ್ಯೆ ಸೋಮವಾರ ರಾತ್ರಿ ವೇಳೆಗೆ 2.50 ಲಕ್ಷ ಸಮೀಪಿಸಿದೆ.

ಜಾನ್ ಹಾಪ್ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಅಂಕಿಅಂಶ ಪ್ರಕಾರ, ಈವರೆಗೆ ಜಗತ್ತಿನಾದ್ಯಂತ ಕೊರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 248,164ಕ್ಕೆ ಏರಿಕೆಯಾಗಿದೆ. 3,534,367 ಜನರಿಗೆ ಸೋಂಕು ತಗುಲಿದೆ. ಈ ಪೈಕಿ 1,135,087 ಜನ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ಈವರೆಗೆ ಅತಿಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಅತಿಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಈವರೆಗೆ 1,161,805 ಜನ ಸೋಂಕಿತರಾಗಿದ್ದು, ಮೃತರ ಸಂಖ್ಯೆ 67,798ಕ್ಕೆ ಏರಿಕೆಯಾಗಿದೆ.

ಸ್ಪೇನ್‌ನಲ್ಲಿ ಸೋಂಕಿತರ ಸಂಖ್ಯೆ 217,466 ತಲುಪಿದ್ದು, 25,264 ಸಾವು ಸಂಭವಿಸಿದೆ. ಇಟಲಿಯಲ್ಲಿ 210,717 ಜನ ಸೋಂಕಿತರಾಗಿದ್ದು, 29,079 ಜನ ಮೃತಪಟ್ಟಿದ್ದಾರೆ. ಬ್ರಿಟನ್‌ನಲ್ಲಿ 187,842 ಜನರಿಗೆ ಈವರೆಗೆ ಸೋಂಕು ತಗುಲಿದ್ದು, ಮೃತಪಟ್ಟವರ ಸಂಖ್ಯೆ 28,808ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಒಂದೇ ದಿನ 2,537 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು 83 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ದೇಶದ ಸೋಂಕಿತರ ಸಂಖ್ಯೆ 42,836 ತಲುಪಿದ್ದು, ಈವರೆಗೆ 1,389 ಮಂದಿ ಮೃತಪಟ್ಟಿದ್ದಾರೆ.

ಸಿಂಗಾಪುರದಲ್ಲಿರುವ 4800 ಭಾರತೀಯರಿಗೆ ಕೊರೊನಾ: ಸಿಂಗಾಪುರದಲ್ಲಿ ಭಾರತದ 4,800 ಮಂದಿಗೆ ಸೋಂಕು ಕೊರೊನಾ ಸೋಂಕು ತಗುಲಿದ್ದು, ಇದರಲ್ಲಿ ಶೇ 90ರಷ್ಟು ಮಂದಿ ಕಾರ್ಮಿಕರಾಗಿದ್ದಾರೆ. ವಿದೇಶಿಯರೊಂದಿಗೆ ಕೋಣೆ ಹಂಚಿಕೊಂಡು ಇರುವವರಾಗಿದ್ದಾರೆ ಎಂದು ಅಲ್ಲಿರುವ ಭಾರತೀಯ ರಾಯಭಾರಿ ಜವಾದ್ ಅಶ್ರಫ್ ಮಾಹಿತಿ ನೀಡಿದ್ದಾರೆ. ಸಿಂಗಾಪುರದಿಂದ ಭಾರತಕ್ಕೆ ಬರಲು ವಿದ್ಯಾರ್ಥಿಗಳು ಸೇರಿದಂತೆ 3,500ಕ್ಕಿಂತಲೂ ಹೆಚ್ಚು ಜನರು ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಸಿಂಗಾಪುರದಲ್ಲಿ ಈವರೆಗೆ 18,778 ಮಂದಿಗೆ ಸೋಂಕು ತಗುಲಿದ್ದು, 18 ಜನ ಮೃತಪಟ್ಟಿದ್ದಾರೆ. 1,457 ಜನ ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು