ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಚಿಕಿತ್ಸೆ: ಭರವಸೆ ಮೂಡಿಸಿದ ‘ರೆಮ್‌ಡೆಸಿವಿರ್‌’

Last Updated 27 ಮೇ 2020, 19:55 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಕೋವಿಡ್‌–19 ಚಿಕಿತ್ಸೆಯಲ್ಲಿ ವೈರಾಣು ನಿರೋಧಕ ಔಷಧಿ ‘ರೆಮ್‌ಡೆಸಿವಿರ್‌’ ಭರವಸೆ ಮೂಡಿಸಿದೆ ಎಂದು ಇತ್ತೀಚಿನ ಅಧ್ಯಯನ ವರದಿ ತಿಳಿಸಿದೆ.

ಅಮೆರಿಕದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಲರ್ಜಿ ಆ್ಯಂಡ್‌ ಇನ್‌ಫೆಕ್ಚಿಯಸ್‌ ಡಿಸೀಜಸ್‌ (ಎನ್‌ಐಎಐಡಿ) ಪ್ರಾಯೋಜಿತ ಕ್ಲಿನಿಕಲ್‌ ಟ್ರಯಲ್‌, ಈ ಔಷಧಿ ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿದೆ ಎಂದು ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌ನಲ್ಲಿ ಪ್ರಕಟವಾದ ವಿಶ್ಲೇಷಣಾತ್ಮಕ ವರದಿ ತಿಳಿಸಿದೆ.

ಕಳೆದ ಫೆಬ್ರುವರಿ 21ರಂದು ಆರಂಭವಾಗಿದ್ದ ಕ್ಲಿನಿಕಲ್‌ ಟ್ರಯಲ್ 10 ದಿನಗಳ ಕಾಲ ನಡೆದಿತ್ತು. 10 ದೇಶಗಳ 1,063 ರೋಗಿಗಳನ್ನು ಅಧ್ಯಯನದ ಭಾಗವಾಗಿದ್ದರು. ಈ ರೋಗಿಗಳ ಪೈಕಿ ಕೆಲವರಿಗೆ ರೆಮ್‌ಡೆಸಿವಿರ್‌ ಔಷಧಿ ನೀಡಲಾಗಿದ್ದರೆ, ಇನ್ನೂ ಕೆಲವರಿಗೆ ರೆಮ್‌ಡೆಸಿವಿರ್‌ ಹೊರತುಪಡಿಸಿ ಇತರ ಔಷಧಿಗಳನ್ನು ನೀಡಲಾಗಿತ್ತು.

ಯಾರಿಗೆ ಯಾವ ಔಷಧಿಗಳನ್ನು ನೀಡಲಾಗಿದೆ ಎಂಬುದು ಅಧ್ಯಯನ ಕೈಗೊಂಡವರಿಗಾಗಲಿ, ರೋಗಿಗಳಿಗಾಗಲಿ ತಿಳಿಸಿರಲಿಲ್ಲ. ರೆಮ್‌ಡೆಸಿವಿರ್‌ ಔಷಧಿಯನ್ನು ನೀಡಲಾಗಿದ್ದ ರೋಗಿಗಳು ಕಡಿಮೆ ಅವಧಿಯಲ್ಲಿ ಚೇತರಿಸಿಕೊಂಡಿದ್ದರು ಎಂದು ಅಧ್ಯಯನ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT