ನವಾಜ್‌ ಷರೀಫ್‌ ಬಿಡುಗಡೆಗೆ ಇಸ್ಲಾಮಾಬಾದ್ ಹೈಕೋರ್ಟ್‌ ಆದೇಶ

7
ಭ್ರಷ್ಟಾಚಾರ ಹಗರಣ: ಜೈಲುಶಿಕ್ಷೆ ರದ್ದು,

ನವಾಜ್‌ ಷರೀಫ್‌ ಬಿಡುಗಡೆಗೆ ಇಸ್ಲಾಮಾಬಾದ್ ಹೈಕೋರ್ಟ್‌ ಆದೇಶ

Published:
Updated:
Deccan Herald

ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರ ಶಿಕ್ಷೆಯನ್ನು ನ್ಯಾಯಾಲಯ ರದ್ದುಪಡಿಸಿದ್ದು, ಭಾರಿ ಭದ್ರತೆಯ ಕಾರಾಗೃಹದಿಂದ ಬಿಡುಗಡೆ ಮಾಡುವಂತೆ ಬುಧವಾರ ಆದೇಶಿಸಿದೆ. ಷರೀಫ್‌ ಜತೆಗೆ ಪುತ್ರಿ ಮರಿಯಂ ಮತ್ತು ಅಳಿಯ ಸಫ್ದಾರ್‌ ಅವರಿಗೂ ಬಿಡುಗಡೆ ಅವಕಾಶ ನೀಡಲಾಗಿದೆ.

ಲಂಡನ್‌ನಲ್ಲಿ ಐಷಾರಾಮಿ ಫ್ಲಾಟ್ ಖರೀದಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲುಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಷರೀಫ್, ಪುತ್ರಿ ಮತ್ತು ಅಳಿಯ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠ ನಡೆಸಿತ್ತು.

ಜುಲೈ 6 ರಂದು ಪಾಕಿಸ್ತಾನದ ಹೊಣೆಗಾರಿಕೆ ನ್ಯಾಯಲಯದ ನ್ಯಾಯಾಧೀಶ ಬಷೀರ್‌ ಅವರು ಷರೀಫ್‌ ಸೇರಿ ಮೂವರಿಗೆ ವಿಧಿಸಿದ್ದ ಜೈಲುಶಿಕ್ಷೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಅತ್ತರ್‌ ಮಿನಾಲ್ಹಾ ಅವರು ರದ್ದುಪಡಿಸಿದರು. ಮೂವರೂ ₹50 ಸಾವಿರದ ಜಾಮೀನು ಬಾಂಡ್ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಷರೀಫ್ ಅವರಿಗೆ 11 ವರ್ಷ, ಮರಿಯಂ ಅವರಿಗೆ ಎಂಟು  ಮತ್ತು ಸಫ್ದಾರ್‌ಗೆ ಒಂದು ವರ್ಷ ಶಿಕ್ಷೆ ವಿಧಿಸಲಾಗಿತ್ತು. ಈ ಮೂವರು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿದ್ದರು. 

ಅರ್ಜಿಗಳ ಸಮರ್ಥನಿಯತೆ ಬಗ್ಗೆ ತೀರ್ಪನ್ನು ಮೊದಲು ಪ್ರಕಟ ಮಾಡುವಂತೆ ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೊ (ಎನ್‌ಎಬಿ)ಮಾಡಿದ್ದ ಮನವಿಯನ್ನು ಹೈಕೋರ್ಟ್‌ ರದ್ದುಪಡಿಸಿದೆ. ಇದೇ ವೇಳೆ ವಿಳಂಬ ತಂತ್ರಗಳನ್ನು ಅನುಸರಿಸಿದ ಕಾರಣಕ್ಕೆ ಎನ್‌ಎಬಿ ವಕೀಲರಿಗೆ ₹20 ಸಾವಿರ ದಂಡವನ್ನೂ ಪೀಠ ವಿಧಿಸಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !