ಶನಿವಾರ, ಮೇ 30, 2020
27 °C

ಭಾರತದಲ್ಲಿರುವ ಪ್ರಜೆಗಳನ್ನು ವಾಪಸ್ಸು ಕರೆಸಿಕೊಳ್ಳಲು ನಿರ್ಧರಿಸಿದ ಅಮೆರಿಕ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಸಿಂಗ್ಟನ್‌: ಭಾರತದಲ್ಲಿ ಉಳಿದಿರುವ ಅಮೆರಿಕ ಪ್ರಜೆಗಳನ್ನು ತವರಿಗೆ ವಾಪಸ್ಸು ಕರೆಸಿಕೊಳ್ಳಲು ಟ್ರಂಪ್ ನೇತೃತ್ವದ ಸರ್ಕಾರ ಸಹಾಯಹಸ್ತ ಚಾಚಿದೆ.

ಈ ಬಗ್ಗೆ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವ ಅಲ್ಲಿನ ಸರ್ಕಾರ ಅಮೆರಿಕ ಪ್ರಜೆಗಳ ವಾಪಸ್ಸಾತಿಗೆ ಮುಂಬೈ ಹಾಗೂ ದೆಹಲಿಯಿಂದ ವಿಮಾನಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದೆ.

ತನ್ನ ಮನವಿಗೆ ಭಾರತ ಸರ್ಕಾರ ಸ್ಪಂಧಿಸಿರುವುದಕ್ಕೆ ಅಮೆರಿಕ ಧನ್ಯವಾದ ಹೇಳಿದೆ. 

ಭಾರತದಲ್ಲಿರುವ ತನ್ನ ಪ್ರಜೆಗಳನ್ನು ವಾಪಸ್ಸು ಕರೆಸಿಕೊಳ್ಳುವುದು ಅತಿ ಮುಖ್ಯ ಕಾರ್ಯವೆಂದು ಅಮೆರಿಕ ತಿಳಿಸಿದೆ.

ಕೊರೊನಾ ವೈರಸ್‌ ಹರಡುವಿಕೆ ನಿಯಂತ್ರಿಸಲು ಭಾರತ ಸರ್ಕಾರ ವಿದೇಶಿ ವಿಮಾನಗಳ ಹಾರಾಟಕ್ಕೆ ತಾತ್ಕಾಲಿಕ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಆ ಹಿನ್ನೆಲೆಯಲ್ಲಿ ಭಾರತದಲ್ಲಿ ನೆಲೆಸಿರುವ ಅಮೆರಿಕ ಪ್ರಜೆಗಳು ತಮ್ಮ ದೇಶಕ್ಕೆ ವಾಪಸ್ಸಾಗದೇ ಇಲ್ಲಿಯೇ ಉಳಿದಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು