ಕರಾಚಿ:ಮೂರನೇ ಮದುವೆಯಾಗುತ್ತಿದ್ದ ವ್ಯಕ್ತಿಯೊಬ್ಬರಿಗೆ ವಿವಾಹ ಸಮಾರಂಭದ ವೇಳೆಯೇ ಮೊದಲ ಪತ್ನಿ ಥಳಿಸಿದ ಘಟನೆಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.

ಕರಾಚಿಯ ಸಖಿ ಹಸನ್ ಚೌರಾಂಗಿ ಪ್ರದೇಶದಲ್ಲಿ ಆಸಿಫ್ ರಫೀಕ್ ಎಂಬುವವರ ಮೂರನೇ ವಿವಾಹ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ರಫೀಕ್ ಮೊದಲ ಪತ್ನಿ ಮದಿಹಾ ಮತ್ತು ಆಕೆಯ ಸಂಬಂಧಿಕರು ಮದುಮಗನಿಗೆ ಯದ್ವಾತದ್ವಾ ಹೊಡೆದಿದ್ದಾರೆ. ಬಟ್ಟೆಯನ್ನೂ ಎಳೆದು ಹರಿದುಹಾಕಿದ್ದಾರೆ. ಬಳಿಕ ಪೊಲೀಸರು ಮದುಮಗನನ್ನು ರಕ್ಷಿಸಿದ್ದಾರೆ ಎಂದುಎಕ್ಸ್ಪ್ರೆಸ್ ಟ್ರಿಬ್ಯೂನ್ವರದಿ ಮಾಡಿದೆ.

2014ರಲ್ಲಿಆಸಿಫ್ ರಫೀಕ್ ತನ್ನನ್ನು ವಿವಾಹವಾಗಿದ್ದಾರೆ ಎಂದುಮದಿಹಾ ಹೇಳಿಕೊಂಡಿದ್ದಾರೆ. ತನ್ನ ಒಪ್ಪಿಗೆ ಇಲ್ಲದೆ ಜಿನ್ನಾ ವಿಶ್ವವಿದ್ಯಾಲಯದ ನೌಕರಳನ್ನುಆಸಿಫ್ ಎರಡನೇ ಮದುವೆಯಾಗಿದ್ದರು. ಈ ವಿಚಾರ ಗಮನಕ್ಕೆ ಬಂದು ತರಾಟೆಗೆ ತೆಗೆದುಕೊಂಡಾಗ, ಮುಂದೆ ನಿನ್ನೊಂದಿಗೇ ವಾಸಿಸುವುದಾಗಿ ಭರವಸೆಯನ್ನೂ ನೀಡಿದ್ದರು ಎಂದೂ ಮದಿಹಾ ಹೇಳಿದ್ದಾರೆ.

ಮದಿಹಾ ಮತ್ತು ಸಂಬಂಧಿಕರು ಮದುಮಗನಿಗೆ ಹೊಡೆದಿದ್ದು ಸಾಲದೆಂಬಂತೆ, ವಶಕ್ಕೆ ಪಡೆದ ಬಳಿಕ ಪೊಲೀಸರೂ ಎರಡೇಟು ನೀಡಿದ್ದಾರೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋದಆಸಿಫ್ ಬೆನ್ನಟ್ಟಿದ ಮದಿಹಾ ಮತ್ತು ಸಂಬಂಧಿಕರು ಮತ್ತೆ ಹಲ್ಲೆ ನಡೆಸಿದ್ದಾರೆ. ಇವರಿಂದ ತಪ್ಪಿಸಿಕೊಳ್ಳಲು ಬಸ್ಸೊಂದರ ಅಡಿ ನುಸುಳಿದಆಸಿಫ್ಗೆ ನಂತರ ಸ್ಥಳೀಯರು ರಕ್ಷಣೆ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

‘ಏಕಕಾಲದಲ್ಲಿ ನಾಲ್ವರನ್ನು ಮದುವೆಯಾಗುವುದು ನನ್ನ ಹಕ್ಕು’:ಪ್ರಕರಣದ ಬಗ್ಗೆ ಆಸಿಫ್ ಹೇಳುವುದೇ ಬೇರೆ. ’ನಾನು ಮದಿಹಾಗೆ ವಿಚ್ಛೇದನ ನೀಡಿದ್ದೇನೆ. ಹೀಗಾಗಿ ಮತ್ತೊಂದು ಮದುವೆಯಾಗಲು ಆಕೆಯ ಅನುಮತಿ ಬೇಕಿಲ್ಲ. ಏಕಕಾಲದಲ್ಲಿ ನಾಲ್ವರು ಮಹಿಳೆಯರನ್ನು ವಿವಾಹವಾಗುವುದು ನನ್ನ ಹಕ್ಕು’ ಎಂಬುದುಆಸಿಫ್ ಪ್ರತಿಪಾದನೆ.

ಕೌಟುಂಬಿಕ ಕಲಹವಾದ ಕಾರಣ ನ್ಯಾಯಾಲಯದ ಮೊರೆಹೋಗುವಂತೆ ಇಬ್ಬರಿಗೂ ಪೊಲೀಸರು ಸಲಹೆ ನೀಡಿದ್ದಾರೆ. ಆಸಿಫ್ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಹಲ್ಲೆ ಪ್ರಕರಣ ದಾಖಲಿಸಿಕೊಳ್ಳುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.